ಒಳಚರಂಡಿ ಕಾಮಗಾರಿ ನಿಧಾನಗತಿ : ರಸ್ತೆ ಅವ್ಯವಸ್ಥೆ-ಟ್ರೋಲ್‌ ವಿಡಿಯೋ ವೈರಲ್

0

ಕಾರ್ಕಳ : ನಗರದ ಒಳಚರಂಡಿ ಕಾಮಗಾರಿ ನಿಧಾನಗತಿ ಹಾಗೂ ಅಸಮರ್ಕವಾಗಿ ನಡೆಯುತ್ತಿದೆ ಎಂದು ನಗರದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾ. 9ರಂದು ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಬಳಿಕ ಕೊರೊನಾ ಕರಿಛಾಯೆಯಿಂದಾಗಿ ಕಾಮಗಾರಿ ಸ್ಥಗಿತಗೊಳ್ಳುವಂತಾಯಿತು. ಅನಂತರ ಕಾಮಗಾರಿಗೆ ಮರುಚಾಲನೆ ದೊರೆತರೂ ನಿರೀಕ್ಷಿತ ವೇಗದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಮತ್ತು  ಅಸಮರ್ಪಕವಾಗಿ ಸಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕುತ್ತಿದ್ದಾರೆ.

ನಿತ್ಯ ತೊಂದರೆ

ಒಳಚರಂಡಿ ಕಾಮಗಾರಿ ಅಸಮರ್ಪಕವಾಗಿ ನಡೆಯುತ್ತಿರುವುದರಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಅಲ್ಲದೇ ಸ್ಥಳೀಯ ಕುಡಿಯುವ ನೀರಿನ ಬಾವಿಗಳು ಕಲುಷಿತಗೊಂಡಿದೆ. ಈ ಕುರಿತು ಪುರಸಭೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾದರೂ ಯಾವೊಂದು ಪ್ರಯೋಜನವಾಗಿಲ್ಲ. ಒಳಚರಂಡಿ ನಿರ್ಮಾಣದ ಬಳಿಕ ರಸ್ತೆ ಸರಿಪಡಿಸುವ ನಿಟ್ಟಿನಲ್ಲಿ ಜಲ್ಲಿ ಹಾಸಲಾಗಿತ್ತು. ಇದನ್ನು ಸಮತಟ್ಟುಗೊಳಿಸಲು ಬಂದ ರೋಲರ್‌ 3 ತಿಂಗಳಾದರೂ ಅಲ್ಲಿಂದ ಕದಲದೇ ಇರುವುದು ಅಂಗಡಿಗಳಿಗೆ ತೊಂದರೆಯಾಗಿದೆ. ಪುರಸಭಾ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಿದರೆ  ಅವರು ಒಳಚರಂಡಿ ಕಾಮಗಾರಿ ಉಸ್ತುವಾರಿ ವಹಿಸಿರುವ ಇಂಜಿನೀಯರ್‌ ರಕ್ಷಿತ್‌ ಅವರನ್ನು ಸಂಪರ್ಕಿಸಲು ತಿಳಿಸುತ್ತಾರೆ. ಯಾರಲ್ಲಿ ಹೇಳಿಕೊಂಡರೂ ಉಪಯೋಗವಿಲ್ಲ ಎಂದು ಸ್ಥಳೀಯ ನಿವಾಸಿ ದಯಾನಂದ ಪೈ ಅವರು ತಿಳಿಸಿದರು.

ವಿಡಿಯೋ ವೈರಲ್‌

ಇಲ್ಲಿನ ರಸ್ತೆ ಅವ್ಯವಸ್ಥೆ ಕುರಿತು ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದೀಗ ಭಾರಿ ವೈರಲ್‌ ಆಗಿದೆ.

Previous articleಸುಶಾಂತ್‌ ಸಿಂಗ್‌ ಸಾವಿನ ತನಿಖೆ ಸಿಬಿಐಗೊಪ್ಪಿಸಲು ಸುಪ್ರೀಂ ಕೋರ್ಟ್‌ ಆದೇಶ  
Next articleಮೂರು ತಿಂಗಳಿನಿಂದ ಸರಕಾರಿ ಆಸ್ಪತ್ರೆ ಡಿʼಗ್ರೂಪ್‌ ನೌಕರರಿಗೆ ವೇತನವಿಲ್ಲ

LEAVE A REPLY

Please enter your comment!
Please enter your name here