
ದಿಲ್ಲಿ, ಆ. 19: ಕೊರೊನಾದಿಂದಾಗಿ ದೇಶದಲ್ಲಿ 41 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ನಿರ್ಮಾಣ ಮತ್ತು ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರ ಮೇಲೆ ಇದು ಹೆಚ್ಚು ಪರಿಣಾಮ ಬೀರಿದೆ ಎಂದು ಹೇಳುತ್ತಿದೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ಮತ್ತು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಜಂಟಿ ವರದಿ.
ಏಷ್ಯಾ ಹಾಗೂ ಪೆಸಿಫಿಕ್ ನಲ್ಲಿ ಕೋವಿಡ್ -19 ಯುವ ಉದ್ಯೋಗ ಬಿಕ್ಕಟ್ಟಿನ ನಿರ್ವಹಣೆ ಎಂಬ ಶೀರ್ಷಿಕೆಯೊಂದಿಗೆ ಮಂಗಳವಾರ ಬಿಡುಗಡೆಯಾದ ಐಎಲ್ಒ-ಎಡಿಬಿ ವರದಿಯಲ್ಲಿ, ಭಾರತದಲ್ಲಿ 21 ರಿಂದ 25 ವರ್ಷದ 41 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ನಿರ್ಮಾಣ ಮತ್ತು ಕೃಷಿ ಸೇರಿ ಏಳು ಪ್ರಮುಖ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಉದ್ಯೋಗ ನಷ್ಟವಾಗಿದೆ ಎಂದು ಈ ವರದಿ ಹೇಳುತ್ತಿದೆ.