
ಪುತ್ತೂರು, ಆ.16: ಬೆಂಗಳೂರಿನಿಂದ ಮ<ಗಳೂರಿಗೆ ಸಿಮೆಂಟ್ ಲೋಡ್ ತರುತ್ತಿದ್ದ ಲಾರಿಗೆ ಬೆಂಕಿ ಹತ್ತಿಕೊಂಡು ಲಾರಿ ಭಾಗಶಃ ಸುಟ್ಟುಹೋದ ಘಟನೆ ಸೋಮವಾರ ಬೆಳಗ್ಗೆ ಗುಂಡ್ಯ ಸಮೀಪ ಸಂಭವಿಸಿದೆ.
ಗುಂಡ್ಯ ಸಮೀಪಿಸುತ್ತಿರುವಾ ಲಾರಿಗೆ ಬೆಂಕಿ ಹತ್ತಿಕೊಂಡಿದೆ. ಇದು ತಿಳಿದಾಗ ಚಾಲಕ ಲಾರಿಯನ್ನು ಬದಿಗೆ ನಿಲ್ಲಿಸಿ ಜಿಗಿದು ಪಾರಾಗಿದ್ದಾನೆ. ಲಾರಿಯಲ್ಲಿ ಚಾಲಕ ಮತ್ತು ಕ್ಲೀನರ್ ಮಾತ್ರ ಇದ್ದರು. ಪುತ್ತೂರು ವಿಭಾಗದ ಅಗ್ನಿಶಾಮಕ ಪಡೆಯವರು ಬಂದು ಬೆಂಕಿ ನಂದಿಸಿದ್ದಾರೆ.