ಸಂಜಯ್ ದತ್ ಮೇಲಿದೆ 735 ಕೋಟಿ ರೂ. ಹೂಡಿಕೆ: ಗತಿ ಏನು?

0

ನಟ ಸಂಜಯ್ ದತ್‌  ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಸುದ್ದಿ ಮೊನ್ನೆ ತಾನೇ ಬಹಿರಂಗವಾಗಿತ್ತು.ಹೆಚ್ಚಿನ ಚಿಕಿತ್ಸೆಗಾಗಿ ದತ್ತ್ ವಿದೇಶಕ್ಕೆ ತೆರಳುವ ತಯಾರಿಯಲ್ಲಿದ್ದಾರೆ.ಕ್ಯಾನ್ಸರ್ ಮೂರನೇ ಹಂತ ತಲುಪಿರುವುದರಿಂದ ತುರ್ತಾಗಿ ಚಿಕಿತ್ಸೆಯ ಅಗತ್ಯವೂ ಇದೆ.

ಸದ್ಯ ದತ್‌ ರನ್ನು ನಂಬಿ ಸಿನಿ ಮಾರುಕಟ್ಟೆಯಲ್ಲಿ  375 ಕೋಟಿ ರೂಪಾಯಿ ಹೂಡಿಕೆಯಾಗಿದೆ.ಸಂಜಯ್ ದತ್ತ್ ನಟಿಸುತ್ತಿರುವ ಸಡಕ್ -2,ಟೊರ್ಬೋಝಾ, ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಶಮ್ಶೇರಾ , ಕೆಜಿಎಫ್ ಚಾಪ್ಟರ್ 2,  ಪೃಥ್ವಿರಾಜ್ ಚಿತ್ರಗಳು ಚಿತ್ರೀಕರಣದ ವಿಬಿಧ ಹಂತಗಳಲ್ಲಿದ್ದು ಒಟ್ಟಾರೆಯಾಗಿ 735 ಕೋಟಿ ರೂಪಾಯಿ ಹೂಡಿಕೆಯಾಗಿದೆ.ಸಂಜಯ್ ದತ್ರ ಅನಾರೋಗ್ಯದಿಂದಾಗಿ ಆ ಚಿತ್ರಗಳ ನಿರ್ಮಾಪಕರೀಗ ತಲೆ ಮೇಲೆ ಕೈಹೊತ್ತು ಚಿಂತಿಸುವ ಸ್ಥಿತಿಯಲ್ಲಿದ್ದಾರೆ.

ಸಡಕ್ – 2,ಚಿತ್ರ ತಯಾರಾಗಿ ಆ.28 ರಂದು ಓಟಿಟಿ ಮೂಲಕ ಬಿಡುಗಡೆಗೊಳ್ಳುವ ತಯಾರಿಯೂ ನಡೆದಿದೆ.ಆಲಿಯಾ ಭಟ್ ಜತೆಯಲ್ಲಿರುವ ಈ ಚಿತ್ರದ ಬಜೆಟ್ 40 ಕೋ.ರೂ. ಮಹೇಶ್ ಭಟ್ ಮೇಲೆ ಸಿನಿ‌ಪ್ರೇಕ್ಷಕರು ಮುನಿದಿರುವುದು ಚಿತ್ರದ ಟ್ರೇಲರ್ ಗೆ ದೊರೆತಿರುವ ವಿಶ್ವ ದಾಖಲೆಯ ಡಿಸ್ ಲೈಕ್ ನಿಂದ ಗೊತ್ತಾಗುತ್ತದೆ.ಜತೆಗೆ ಚಿತ್ರವನ್ನು ಬಾಯ್ಕಾಟ್ ಮಾಡುವ ಅಭಿಯಾನವೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವುದರಿಂದ ಚಿತ್ರದ ಗೆಲುವಿನ ಬಗ್ಗೆಯೂ ಸಂಶಯ ವ್ಯಕ್ತವಾಗುತ್ತಿದೆ.

80 ಕೋ.ರೂ.ಬಜೆಟ್ ನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ತಯಾರಾಗಿದ್ದು ಓಟಿಟಿ ಮೂಲಕ ಬಿಡುಗಡೆಗೊಳ್ಳುವುದಕ್ಕಾಗಿ 120 ಕೋ.ರೂ.ಗೆ ಹಕ್ಕು ಮಾರಾಟವಾಗಿದೆ.

ಟೊರ್ಬಾಝ್ ಚಿತ್ರ 2019 ಎಪ್ರಿಲ್‌ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದು ಈ ಜುಲೈನಲ್ಲಿ ಬಿಡುಗಡೆಗೊಳ್ಳುವ ಯೋಜನೆ ಹಾಕಿಕೊಂಡಿತ್ತು.

ಕನ್ನಡದ ಯಶ್ ಜತೆಗಿನ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲೂ ದತ್ತ್ ಪ್ರಮುಖ ವಿಲನ್ ಅಧಿರಾ ಪಾತ್ರ ನಿರ್ವಹಿಸುತ್ತಿದ್ದಾರೆ.ಈ ಚಿತ್ರದ ಕೇವಲ ಮೂರ್ನಾಲ್ಕು ದಿನದ ಚಿತ್ರೀಕರಣ ಬಾಕಿ ಉಳಿದಿದೆ.

ಅಗ್ನಿಪಥ್ ನಿರ್ದೇಶಕ ಕರಣ್ ಮಲ್ಹೋತ್ರಾರ ನಿರ್ದೇಶನದ  140 ಕೋ.ರೂ.ಬಜೆಟ್ ನ ಶಮ್ಶೇರಾ ಚಿತ್ರ ದ ಕೆಲ ದೃಶ್ಯ ಮತ್ತು ತೇಪೆ ಕಾರ್ಯ ಸೇರಿದಂತೆ ನಾಲ್ಕರಿಂದ ಆರು ದಿನಗಳ ಚಿತ್ರೀಕರಣ ಬಾಕಿ ಇದೆ.

ಮತ್ತೊಂದು ಚಿತ್ರ ‘ ಪೃಥ್ವಿರಾಜ್ ‘ ನ 40% ದಷ್ಟು ಚಿತ್ರೀಕರಣ ಮಾತ್ರ ನಡೆದಿರುತ್ತದೆ.ಆದ್ದರಿಂದ ನಿರ್ಮಾಪಕ, ನಿರ್ದೇಶಕರು ಈಗ ತಮ್ಮ ಚಿತ್ರವನ್ನು ಪೂರ್ಣ ಗೊಳಿಸುವಂತೆಯೂ ಇಲ್ಲ,ದತ್ತ್ ನನ್ನು ಕಾಯುವಂತೆಯೂ ಇಲ್ಲ ಎಂಬಂತಹ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ.

ಏಳಿಂಜೆ ನಾಗೇಶ್, ಮುಂಬಯಿ (9892980750)---
Previous articleಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಲವು ಸ್ಪರ್ಧೆ
Next articleಸಿಮೆಂಟ್‌ ಸಾಗಿಸುತ್ತಿದ್ದ ಲಾರಿಯಲ್ಲಿ ಬೆಂಕಿ ಆಕಸ್ಮಿಕ

LEAVE A REPLY

Please enter your comment!
Please enter your name here