Homeವಿದೇಶಮಾಲ್‌ನಲ್ಲಿ ಗಣೇಶ ವಿಗ್ರಹಗಳನ್ನು ಒಡೆದು ಹಾಕಿದ ಮಹಿಳೆ

Related Posts

ಮಾಲ್‌ನಲ್ಲಿ ಗಣೇಶ ವಿಗ್ರಹಗಳನ್ನು ಒಡೆದು ಹಾಕಿದ ಮಹಿಳೆ

ಬಹ್ರೈನ್‌, ಆ. 17: ಇಲ್ಲಿನ ಮನಾಮದಲ್ಲಿರುವ ಮಾಲ್‌ ಒಂದರಲ್ಲಿ ಮಹಿಳೆಯೊಬ್ಬಳು ಹರಾಮ್…ಹರಾಮ್…‌ ಎಂದು ಕಿರುಚುತ್ತಾ ಗಣೇಶ ವಿಗ್ರಹಗಳನ್ನು ಒಡೆದು ಹಾಕುತ್ತಿರುವ ವೀಡಿಯೊ ಚಿತ್ರಿಕೆಯೊಂದು ವೈರಲ್‌ ಆಗಿದ್ದು, ಮಹಿಳೆ ವಿರುದ್ಧ ಬಹ್ರೈನ್‌ ಅಧಿಕಾರಿಗಳು ಪಂಥವೊಂದರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಕೇಸು ದಾಖಲಿಸಿಕೊಂಡಿದ್ದಾರೆ. ಗಣೇಶೋತ್ಸವ ಸಮೀಪಿಸುತ್ತಿರುವಾಗಲೇ ಗಣೇಶನಿಗೆ ಅಪಚಾರ ಎಸಗಿದ  ಈ ಘಟನೆ  ಸಂಭವಿಸಿದೆ.

ರಾಜಧಾನಿ ಮನಾಮದ ಜುಫೈರ್‌ ಪ್ರದೇಶದಲ್ಲಿರುವ ಮಾಲ್‌ ನಲ್ಲಿ ಭಾನುವಾರ ಮಹಿಳೆ  ಈ ಕೃತ್ಯ ಎಸಗಿದ್ದಾಳೆ  ಎನ್ನಲಾಗಿದೆ.

ಮಹಿಳೆ ಉದ್ದೇಸಪೂರ್ವಕವಾಗಿ ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ.ಧಾರ್ಮಿಕ ಚಿಹ್ನೆಗಳಿಗೆ ಅಪಚಾರ ಎಸಗಿದ ಪ್ರಕರಣವನ್ನು ಅವಳ ವಿರುದ್ಧ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಸುದ್ದಿ ಮಾಧ್ಯಮಗಳಿಗೆ  ಮಾಹಿತಿ ನೀಡಿದ್ದಾರೆ.

ಏನಾಯಿತು?

ಗಣೇಶನ ವಿಗ್ರಹಗಳಿದ್ದ ಶೆಲ್ಫ್‌ ಬಳಿ ಇಬ್ಬರು ಬುರ್ಖಾಧಾರಿ ಮಹಿಳೆಯರಿದ್ದರು. ಈ  ಪೈಕಿ 54 ವರ್ಷದ ಮಹಿಳೆ ಸೇಲ್ಸ್‌ ಮ್ಯಾನ್‌ ಗೆ ಬಯ್ಯುತ್ತಾ ಇದು ಮುಸ್ಲಿಮ್‌  ದೇಶ… ಹರಾಮ್…ಹರಾಮ್‌ ಎಂದು ಕಿರುಚುತ್ತಾ ಗಣೇಶನ ವಿಗ್ರಹಗಳನ್ನು ಎತ್ತಿ ಎತ್ತಿ ನೆಲಕ್ಕೆ ಒಗೆದು ಒಡೆದು ಹಾಕಿದ್ದಾಳೆ.

 

LEAVE A REPLY

Please enter your comment!
Please enter your name here

Latest Posts

error: Content is protected !!