ಹೆಣ್ಣು ಮಕ್ಕಳ ಮದುವೆ ವಯಸ್ಸು ಬದಲಾಗುತ್ತಾ?

0

ದಿಲ್ಲಿ, ಆ. 15:ಹೆಣ್ಣು ಮಕ್ಕಳ ಮದುವೆ ವಯಸ್ಸು ಬದಲಾಗುತ್ತಾ? ಹೀಗೊಂದು ಪ್ರಶ್ನೆ ಪ್ರಧಾನಿ ನರೇಂದ್ರ ಮೋದಿ ಇಂದು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಬಳಿಕ ಸುಳಿದಾಡುತ್ತಿದೆ.

ಹೆಣ್ಣು ಮಕ್ಕಳ ಕನಿಷ್ಠ ವಿವಾಹ ಯೋಗ್ಯ ಪ್ರಾಯ ನಿರ್ಧರಿಸಲು ಸಮಿತಿ ರಚಿಸಲಾಗಿದೆ. ಈ ಸಮಿತಿಯ ವರದಿ ಬಂದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೋದಿ ಭಾಷಣದಲ್ಲಿ ಹೇಳಿದ್ದಾರೆ.

ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೈಟ್ಲಿ ನೇತೃತ್ವದ ಸಮಿತಿ ಮಹಿಳೆಯರ ಕನಿಷ್ಠ  ಮದುವೆ ವಯಸ್ಸಿನ ಪರಾಮರ್ಶೆ ನಡೆಸಿದೆ ಹಾಗೂ ತಾಯಿಯ ಅರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆಯೂ ಅಧ್ಯಯನ ನಡೆಸಿದೆ.

ಸಣ್ಣ ವಯಸ್ಸಿನಲ್ಲೇ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದರಿಂದ ಅವರ ವಿದ್ಯಾಭ್ಯಾಸ ಕುಂಠಿತಗೊಳ್ಳುವುದು ಮಾತ್ರವಲ್ಲದೆ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಈಗಿರುವ   18ರಿಂದ ಕನಿಷ್ಠ 20ಕ್ಕೇರಿಸಬೇಕೆಂಬ ಪ್ರಸ್ತಾವ ಹಿಂದೆಯೂ ಇತ್ತು. ಜೊತೆಗೆ ಜನಸಂಖ್ಯೆ ನಿಯಂತ್ರಣಕ್ಕೂ ಇದು ಪೋರಕ ಕ್ರಮವಾಗಬಹುದು ಎನ್ನಲಾಗುತ್ತಿದೆ.

1978ಕ್ಕಿಂತ ಮೊದಲು ಹೆಣ್ಣು ಮಕ್ಕಳ ಕನಿಷ್ಠ ಮದುವೆ ವಯಸ್ಸು 15 ಇತ್ತು. ಅನಂತರ  ಕಾನೂನಿಗೆ ತಿದ್ದುಪಡಿ ಮಾಡಿ ಹೆಣ್ಣಿಗೆ 18 ಮತ್ತು ಗಂಡಿಗೆ  21 ವರ್ಷ ಮದುವೆ ಪ್ರಾಯ ನಿಗದಿ ಮಾಡಲಾಗಿದೆ. ಆದರೆ ಹೆಣ್ಣು ಮಕ್ಕಳನ್ನು ಚಿಕ್ಕ ಪ್ರಾಯದಲ್ಲೇ ಮದುವೆ ಮಾಡಿ ಕಳುಹಿಸುವ ಬಾಲ್ಯ ವಿವಾಹ ಪದ್ಧತಿ ದೇಶದಲ್ಲಿ ಈಗಲೂ ಜೀವಂತವಿದೆ.

 

 ---
Previous articleಶ್ರೀ ಕೃಷ್ಣದೇವರಾಯ ವಿವಿಯಲ್ಲಿ 105 ಅತಿಥಿ ಉಪನ್ಯಾಸಕರ ಹುದ್ದೆಗಳು
Next articleಕ್ರೈಸ್ಟ್‌ಕಿಂಗ್‌ ಶಾಲೆಯಲ್ಲಿ 74ನೇ ಸ್ವಾತಂತ್ರೋತ್ಸವ

LEAVE A REPLY

Please enter your comment!
Please enter your name here