
ಬೆಂಗಳೂರು, ಆ. 13: ಕೇಂದ್ರ ಸರಕಾರ ಸೆಪ್ಟೆಂಬರ್ನಿಂದ ಶಾಲೆಗಳನ್ನು ಆರಂಭಿಸುವ ಪ್ರಕ್ರಿಯೆ ಶುರು ಮಾಡಬೇಕೆಂದು ಹೇಳಿದ್ದರೂ ಕರ್ನಾಟಕದಲ್ಲಿ ಇದು ಅಸಂಭವ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಮ್ಮ ಮೊದಲ ಆದ್ಯತೆ ಮಕ್ಕಳ ಆರೋಗ್ಯ. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವೇ ಶಾಲೆಗಳನ್ನು ಪ್ರಾರಂಭಿಸುತ್ತೇವೆ ಎಂದಿದ್ದಾರೆ.
ನಮ್ಮ ಮುಂದೆ ದೊಡ್ಡ ಸವಾಲು ಇದೆ. ಮುಂದಿನ ದಿನಗಳು ಹೇಗಿರಬಹುದು ಎಂಬುದನ್ನು ಕೂಡಾ ನಾವು ಆಲೋಚಿಸಬೇಕು. ನನಗೆ ಶಾಲೆ ಆರಂಭಿಸಲು ಅವಸರ ಇದೆ ಎಂಬ ವದಂತಿ ಹರಡಿದ್ದಾರೆ. ನನಗೆ ಅವಸರವಿಲ್ಲ. ಮಕ್ಕಳ ಸುರಕ್ಷತೆಯನ್ನು ಗಮನಿಸಿ ಸೆಪ್ಟೆಂಬರ್ನಲ್ಲಿ ಶಾಲೆಗಳನ್ನು ಪ್ರಾರಂಭಿಸುವುದು ಅಸಂಭವ ಎಂದು ಹೇಳಿದ್ದಾರೆ ಸುರೇಶ್ ಕುಮಾರ್.
ವಿದ್ಯಾಗಮನ ಕಾರ್ಯಕ್ರಮದ ಮೂಲಕ ಕಲಿಯುವ ಪ್ರಕ್ರಿಯೆಯನ್ನು ಮುಂದುವರಿಸಿದ್ದೇವೆ. ಶಿಕ್ಷಕರೂ ಮಕ್ಕಳಿಗೆ ಕಲಿಸಲು ಭಾರಿ ಪ್ರಯತ್ನಪಡುತ್ತಿದ್ದಾರೆ ಎಂದು ಹೇಳಿದ್ದಾರೆ.