ಅತಿ ದೀರ್ಘಾವಧಿಗೆ ಆಧಿಕಾರದಲ್ಲಿದ್ದ ಕಾಂಗ್ರೆಸ್ಸೇತರ ಪ್ರಧಾನಿ –ಮೋದಿ ದಾಖಲೆ

0

ಅಟಲ್‌ ದಾಖಲೆ ಹಿಂದಿಕ್ಕಿದ ಮೋದಿ

ದಿಲ್ಲಿ, ಆ. 13: ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಬದುಕಿನಲ್ಲಿ ಗುರುವಾರ ಮತ್ತೊಂದು ಮೈಲುಗಲ್ಲು ಸ್ಥಾಪನೆಯಾಗಿದೆ.  ದೀರ್ಫಕಾಲ ಅಧಿಕಾರ ನಡೆಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು 2,268 ದಿನಗಳ ಕಾಲ ಅಧಿಕಾರದಲ್ಲಿದ್ದರು. ಇದೀಗ 67 ರ ಹರೆಯದ  ನರೇಂದ್ರ ಮೋದಿ ಅವರು ಅಟಲ್‌ ದಾಖಲೆಯನ್ನು  ಹಿಂದಿಕ್ಕಿದ್ದಾರೆ.

ಇಂದು ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿಯೂ ಹೊರಹೊಮ್ಮಿದ್ದಾರೆ. ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು 16 ವರ್ಷ 286 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಮಗಳು ಇಂದಿರಾ ಗಾಂಧಿ 11 ವರ್ಷ 59 ದಿನಗಳ ಅವಧಿಯೊಂದಿಗೆ ಎರಡನೇ  ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಭಾರತೀಯ ಪ್ರಧಾನಿ.  ಮನಮೋಹನ್ ಸಿಂಗ್ ಅವರು 10 ವರ್ಷ 4 ದಿನಗಳ ಕಾಲ ಅಧಿಕಾರದಲ್ಲಿದ್ದರು.

 ---
Previous articleಸೆಪ್ಟೆಂಬರ್ ನಲ್ಲಿ ಶಾಲಾರಂಭ ಅಸಂಭವ : ಸುರೇಶ್‌ ಕುಮಾರ್‌  
Next articleಈ ಬಾರಿ ಮುಖದಲ್ಲಿ ರಾರಾಜಿಸಲಿದೆ ರಾಷ್ಟ್ರಧ್ವಜ

LEAVE A REPLY

Please enter your comment!
Please enter your name here