ಈ ಬಾರಿ ಮುಖದಲ್ಲಿ ರಾರಾಜಿಸಲಿದೆ ರಾಷ್ಟ್ರಧ್ವಜ

0

ಕೋಲ್ಕತ್ತಾ, ಆ. 13: ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರಧ್ವಜ ಜನರ ಮುಖದಲ್ಲೇ ರಾರಾಜಿಸಲಿದೆ. ಕೊರೊನಾ ಸೋಂಕಿನ ಕಾಲದಲ್ಲಿ ಅನಿವಾರ್ಯವಾಗಿ ಧರಿಸಲೇ ಬೇಕಾಗಿರುವ ಮಾಸ್ಕ್‌ ಈಗ ರಾಷ್ಟ್ರಧ್ವಜದ ರೂಪ ಪಡೆದುಕೊಂಡಿದೆ.

ಪಶ್ಚಿಮ ಬಂಗಾಳದ ಬರ್ಧ್ವಾನ್‌ ಜಿಲ್ಲೆಯ ಕೆಲವು ಮನೆಗಳಲ್ಲಿ ರಾಷ್ಟ್ರಧ್ವಜ ಮಾಸ್ಕ್‌ಗಳು ಭರದಿಂದ ತಯಾರಾಗುತ್ತಿವೆ.ಈಗಾಗಲೇ ಮಾರುಕಟ್ಟೆಗೆ ಬಂದಿರುವ ಈ ಮಾಸ್ಕ್ ಗಳು ಕ್ರೇಜ್‌ ಹುಟ್ಟಿಸಿವೆ.

ಖೊಕೋನ್‌ ಶೇಖ್‌ ಮತ್ತು ಅವರ ಹೆಂಡತಿಗೆ ಒಂದು ವಾರದಿಂದ  ಬಿಡುವಿಲ್ಲದಷ್ಟು ಕೆಲಸ. ಇಬ್ಬರು ಸೇರಿ ಸುಮಾರು  250 ಮಾಸ್ಕ್‌ ನಿತ್ಯ ತಯಾರಿಸುತ್ತಿದ್ದಾರಂತೆ.

ಮುಂಬಯಿಯಲ್ಲಿ ಕಾರ್ಮಿಕರಾಗಿದ್ದ ಖೊಕೋನ್‌ ಲಾಕ್‌ ಡೌನ್‌ ಸಂದರ್ಭದಲ್ಲಿ ಊರಿಗೆ ವಾಪಾಸಾಗಿದ್ದರು.ಹೊಟ್ಟೆಪಾಡಿಗಾಗಿ ಪ್ರಾರಂಭಿಸಿದ  ಮಾಸ್ಕ್‌ ಹೊಲಿಯುವ ಉದ್ಯೋಗ ಈಗ  ಅವರ ಕೈ ಹಿಡಿದಿದೆ.  20 ರೂ.ಬೆಲೆಯ ಮಾಸ್ಕ್‌ ಅನ್ನು ಜನರು ಹುಡುಕಿಕೊಂಡು ಬಂದು ಖರೀದಿಸುತ್ತಿದ್ದಾರೆ.ಎರಡು ದಿನಗಳಲ್ಲಿ ಸಾಧ್ಯವಾದಷ್ಟು ಕಮಾಯಿಸಬೇಕು ಎಂಬ ಧಾವಂತದಲ್ಲಿ ಖೊಕೋನ್‌  ದಂಪತಿ ಹಗಲಿರುಳು ಲೆಕ್ಕಿಸದೆ ದುಡಿಯುತ್ತಿದ್ದಾರೆ.---
Previous articleಅತಿ ದೀರ್ಘಾವಧಿಗೆ ಆಧಿಕಾರದಲ್ಲಿದ್ದ ಕಾಂಗ್ರೆಸ್ಸೇತರ ಪ್ರಧಾನಿ –ಮೋದಿ ದಾಖಲೆ
Next articleಶಾಸಕ ಲಾಲಾಜಿ ಮೆಂಡನ್‌ ಅವರಿಗೆ ಕೊರೊನಾ ಪೊಸಿಟಿವ್‌

LEAVE A REPLY

Please enter your comment!
Please enter your name here