ದಿಲ್ಲಿ, ಆ. 11: ಕೊರೊನಾ ಕಾರಣದಿಂದ ವಿದೇಶದಲ್ಲಿ ಅತಂತ್ರರಾಗಿ ಸಿಕ್ಕಿಬಿದ್ದಿದ್ದ ಸುಮಾರು 10 ಲಕ್ಷ ಭಾರತೀಯರು ವಂದೇ ಭಾರತ್ ಮಿಷನ್ ಅಡಿಯಲ್ಲಿ ದೇಶಕ್ಕೆ ಮರಳಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. 1,30,000 ಹೆಚ್ಚು ಜನರು ಭಾರತದಿಂದ ವಿವಿಧ ದೇಶಗಳಿಗೆ ಈ ಮಿಷನ್ ಅಡಿಯಲ್ಲಿ ಪ್ರಯಾಣಿಸಿದ್ದಾರೆ ಎಂದಿದ್ದಾರೆ.
“ವಂದೇ ಭಾರತ್ ಮಿಷನ್ ಅಡಿಯಲ್ಲಿ ಸುಮಾರು ಒಂದು ಮಿಲಿಯನ್ ಸಿಲುಕಿ ಹಾಕಿಕೊಂಡ ಭಾರತೀಯರು ವಿವಿಧ ವಿಧಾನಗಳ ಮೂಲಕ ಮರಳಿದ್ದಾರೆ ಮತ್ತು 130 ಸಾವಿರಕ್ಕೂ ಹೆಚ್ಚು ಜನರು ಭಾರತದಿಂದ ವಿವಿಧ ದೇಶಗಳಿಗೆ ಪ್ರಯಾಣಿಸಿದ್ದಾರೆ. ನಮ್ಮ ಜನರ ಆಕಾಂಕ್ಷೆಗಳಿಂದ ಪ್ರೇರಿತವಾದ ಈ ಮಿಷನ್ ತೊಂದರೆಗೀಡಾದ ನಾಗರಿಕರ ವಾಪಸಾತಿ ಮತ್ತು ಹೊರಹೋಗುವ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಿದೆ” ಎಂದಿದ್ದಾರೆ.
ಕೊರೋನಾವೈರಸ್ ನಿರ್ಬಂಧದಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ವಂದೇ ಭಾರತ್ ಮಿಷನ್ ಮೇ ಆರಂಭದಲ್ಲಿ ಪ್ರಾರಂಭವಾಯಿತು.