ಸುಳ್ಯ, ಆ. 11: ಇಲ್ಲಿಗೆ ಸಮೂಪದ ನಿಂತಿಕಲ್ಲಿನಲ್ಲಿ ಇಂದು ನಸುಕಿನ ಹೊತ್ತು ರಸ್ತೆಯಲ್ಲಿ ಕಡಿದು ಬಿದ್ದಿದ್ದ ವಿದ್ಯತ್ ಸ್ಪರ್ಶವಾಗಿ ಬೈಕ್ ಸವಾರರೊಬ್ಬರು ಬೈಕ್ ಸಮೇತ ಸುಟ್ಟು ಕರಕಲಾದ ದಾರುಣ ಘಟನೆ ಸಂಭವಿಸಿದೆ.
ಮಂಡೆಕೋಲು ಗ್ರಾಮದ ಮೈತಡ್ಕದ ತಿಮ್ಮಪ್ಪ ಗೌಡರ ಪುತ್ರ ಇಲೆಕ್ಟ್ರಿಶಿಯನ್ ಆಗಿದ್ದ ಉಮೇಶ್ ಗೌಡ (45)ಮೃತಪಟ್ಟವರು. ನಿಂತಿಕಲ್ಲು ಗುಳಿಗನ ಕಟ್ಟೆ ಬಳಿ ಮೂಂಜಾನೆ 5.45ಕ್ಕೆ ಈ ಘಟನೆ ಸಂಭವಿಸಿದೆ.ಕಡಿದು ಬಿದ್ದಿದ್ದ ಹೈಟೆನ್ಶನ್ ವಿದ್ಯತ್ ತಂತಿಯನ್ನು ಗಮನಿಸದೆ ದಾಟಿ ಹೋದದ್ದೇ ದುರಂತಕ್ಕೆ ಕಾರಣಾವಾಯಿತು.
ಉಮೇಶ್ ನಿನ್ನೆ ಬಳ್ಪದಲ್ಲಿರುವ ಹೆಂಡತಿಯ ಮನೆಗೆ ಬಂದಿದ್ದು, ಸಂದು ನಸುಕಿನ 4.30ಗೆ ತನ್ನ ಊರಿಗೆ ಹೊರಟಿದ್ದರು.