ಜಾಗತಿಕ ಕೊರೊನಾ ಸೋಂಕು 2 ಕೋಟಿಗೇರಿಕೆ

0

ಜಿನೇವಾ,ಆ.11:  ಜಾಗತಿಕವಾಗಿ ಕೊರೊನಾ ವೈರಸ್‌ ಹಾವಳಿ  ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 2 ಕೋಟಿ ಗಡಿ ದಾಟಿದೆ.

ವಿಶ್ವದಾದ್ಯಂತ ಈವರೆಗೂ 20,001,019 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 7,33,897 ಮಂದಿಯನ್ನು ಈ ಮಾರಕ ವೈರಸ್ ಬಲಿಪಡೆದುಕೊಂಡಿದೆ.

20,001,019 ಮಂದಿ ಸೋಂಕಿತರ ಪೈಕಿ  12,200,847 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ 7,800,172 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ವಿಶ್ವದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕಾವೊಂದರಲ್ಲೇ 5,251,446 ಸೋಂಕಿತರಿದ್ದು, ಈವರೆಗೆ 166,192 ಮಂದಿ ಸಾವಿಗೀಡಾಗಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 3,057,470 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 101,857 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಈವರೆಗೆ 22.6 ಲಕ್ಷ ಜನರಿಗೆ ಕೊರೋನ ಸೋಂಕು ತಗುಲಿದ್ದು, 45,353 ಮಂದಿ ಬಲಿಯಾಗಿದ್ದಾರೆ.

 

Previous articleಇಂದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ವಿಸ್ತರಿತ ಐಸಿಯು ಘಟಕ ಉದ್ಘಾಟನೆ
Next articleಬೇರೂತ್‌ ಭೀಕರ ಸ್ಫೋಟಕ್ಕೆ ಪ್ರಧಾನಿ ತಲೆದಂಡ: ಒತ್ತಡಕ್ಕೆ ಮಣಿದು ರಾಜೀನಾಮೆ

LEAVE A REPLY

Please enter your comment!
Please enter your name here