
ಬೇರೂತ್, ಆ. 11: ಲೆಬಾನನ್ ರಾಜಧಾನಿ ದೇಶದ ಬೇರೂತ್ ನಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಸ್ಫೋಟಕ್ಕೆ ಆ ದೇಶದ ಪ್ರಧಾನಮಂತ್ರಿ ಹಸನ್ ದಿಯಬ್ ಅವರ ತಲೆದಂಡವಾಗಿದೆ.
ಈ ಸ್ಫೋಟದಲ್ಲಿ ಸುಮಾರು 160 ಜನ ಬಲಿಯಾಗಿ 6 ಸಾವಿರಕ್ಕೂ ಹೆಚ್ಚಿನ ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆಯ ಬಳಿಕ ಲೆಬಾನನ್ ನಲ್ಲಿ ವ್ಯಾಪಕ ಜನಾಕ್ರೋಶ ಉಂಟಾಗಿ ಸರ್ಕಾರವನ್ನು ಜನರು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಪ್ರಧಾನಿ ಹಸನ್ ದಿಯಬ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷದ ಆರಂಭದಲ್ಲಿ ನೂತನ ಪ್ರಧಾನಿಯಾಗಿ ಆಯ್ಕೆಯಾದ ಹಸನ್ ದಿಯಬ್ ಸರ್ಕಾರಕ್ಕೆ ಕಳೆದ ವಾರ ಸಂಭವಿಸಿದ ಸ್ಪೋಟವು ಅತಿದೊಡ್ಡ ಹಿನ್ನಡೆಯಾಗಿದೆ.ಸ್ಫೋಟದ ನಿಖರ ಕಾರಣವನ್ನು ಪತ್ತೆಹಚ್ಚಲು ಲಿಬನಾನ್ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ನೈತಿಕ ಹೊಣೆ ಹೊತ್ತು ದಿಯಬ್ ಪದತ್ಯಾಗ ಮಾಡಿದ್ದಾರೆ.