ಸೆ.1ರಿಂದ ಶಾಲೆಗಳು ಆರಂಭ

ದಿಲ್ಲಿ, ಆ.8: ದೇಶಾದ್ಯಂತ ಸೆ.1ರಿಂದ ಶಾಲೆಗಳನ್ನು ಪ್ರಾರಂಭಿಸಲು ಕೇಂದ್ರ ಸರಕಾರ ಸಿದ್ದತೆಗಳನ್ನು ನಡೆಸಿದೆ. ಈಗಾಗಲೇ ಶಾಲಾರಂಭಕ್ಕೆ ಮಾರ್ಗಸೂಚಿ ರಚಿಸಲಾಗಿದ್ದು, ಆ ಪ್ರಕಾರ ಸೆ.1ರಿಂದ ನ.14ರ ನಡುವೆ ಹಂತಹಂತವಾಗಿ ಶಾಲೆ ಮತ್ತು ಕಾಲೇಜುಗಳನ್ನು ತೆರೆಯಲಾಗುವುದು.

ಶಾಲೆಗಳನ್ನು ಪುನರಾರಂಭಿಸುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತಾಗಿ ವಿವಿಧ ಇಲಾಖೆಗಳ  ಕಾರ್ಯದರ್ಶಿಗಳ ಮಟ್ಟದಲ್ಲಿ ಚರ್ಚಿಸಲಾಗಿದೆ. ಸಚಿವ ಡಾ. ಹರ್ಷವರ್ಧನ್‌ ನೇತೃತ್ವದ ಸಮಿತಿ ಅವುಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಆದರೆ ಶಾಲಾ-ಕಾಲೇಜುಗಳನ್ನು ತೆರೆಯುವ ಕುರಿತಾದ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆಯಾಯ  ರಾಜ್ಯಗಳಿಗೆ ಕೊಡಲಾಗುವುದು.

error: Content is protected !!
Scroll to Top