ದಿಲ್ಲಿ, ಆ. 8 : ಕಳೆದ ಗುರುವಾರ ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಸಮಾರಂಭವನ್ನು ನೇರ ಪ್ರಸಾರದಲ್ಲಿ ಸುಮಾರು 16 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಪ್ರಸಾರ ಭಾರತಿ ಬಿಡುಗಡೆ ಮಾಡಿದ ಅಂಕಿ ಅಂಶ ತಿಳಿಸಿದೆ.
ಈ ಲೈವ್ ಈವೆಂಟ್ ಜಗತ್ತಿನಾದ್ಯಂತ 700 ಕೋಟಿ ವೀಕ್ಷಣೆ ನಿಮಿಷಗಳನ್ನು ಸೃಷ್ಟಿಸಿದೆ.
ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಸಮಾರಂಭದ ನೇರ ಪ್ರಸಾರವನ್ನು 160 ಮಿಲಿಯನ್ ಜನರು ವೀಕ್ಷಿಸಿದ್ದಾರೆ, ಇದರ ಪರಿಣಾಮವಾಗಿ ಭಾರತದ ಟಿವಿ ವಾಹಿನಿಗಳಿಗೆ ಜಗತ್ತಿನಾದ್ಯಂತ 7 ಬಿಲಿಯನ್‌ಗೂ ಹೆಚ್ಚು ವೀಕ್ಷಣೆ ನಿಮಿಷಗಳು ಸೃಷ್ಟಿಯಾಗಿವೆ ಎಂದು ಪ್ರಸಾರ್ ಭಾರತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿ ಶೇಖರ್ ವೆಂಪತಿ ಹೇಳಿದ್ದಾರೆ.
ಆಗಸ್ಟ್ 5 ರಂದು ಬೆಳಿಗ್ಗೆ 10.45 ರಿಂದ ಮಧ್ಯಾಹ್ನ 2 ರ ನಡುವಿನ ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಿ ದೂರದರ್ಶನ ನೀಡಿದ ನೇರಪ್ರಸಾರವನ್ನು ಸುಮಾರು 200 ಚಾನೆಲ್‌ಗಳು ತಮ್ಮಲ್ಲಿ ನೇರ ಪ್ರಸಾರ ಮಾಡಿದವು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಹಿಂದೂ ಧಾರ್ಮಿಕ ಮುಖಂಡರು ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಭೂಮಿ ಪೂಜೆ ಸಮಾರಂಭದ ಮುನ್ನಾದಿನದಂದು ಪ್ರಸಾರ್ ಭಾರತಿ ಅಯೋಧ್ಯೆಯ ಸರಯೂ ಘಾಟ್‌ನಿಂದ ವಿಶೇಷ ಲೈವ್ ಶೋ ಪ್ರಸಾರ ಮಾಡಿದೆ. ಆಗಸ್ಟ್ 5 ರಂದು, ಇದು ಬೆಳಿಗ್ಗೆ 6 ಗಂಟೆಯಿಂದ ಅಯೋಧ್ಯೆಯಲ್ಲಿನ ಘಟನೆಗಳ ನಿರಂತರ ಪ್ರಸಾರವನ್ನು ಪ್ರಾರಂಭಿಸಿತ್ತು.
ಪ್ರಸಾರ್ ಭಾರತಿ ಪಿಎಂ ಮೋದಿಯವರ ಭಾಷಣವನ್ನು ಲಡಾಖಿ, ಒಡಿಯಾ ಮತ್ತು ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅನುವಾದಿಸಿದೆ.