ರಾಮನ ಆದರ್ಶ ಪಾಲನೆಯಿಂದ ರಾಮರಾಜ್ಯ -ಆದರ್ಶ ಗೋಖಲೆ

ಕಾರ್ಕಳ : ಶ್ರೀರಾಮನ ಐದು ಶತಮಾನಗಳ ವನವಾಸ ಅಂತ್ಯವಾಗಿ ಸರ್ವರ ಅಪೇಕ್ಷೆಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಲಭಿಸಿರುವುದು ಅಭಿಮಾನದ ವಿಚಾರ. ಕವಿಕೋಗಿಲೆಗಳ, ಸಾಹಿತ್ಯಾರಾಧಕರ ಸ್ಫೂರ್ತಿ, ಸ್ವರಾಜ್ಯ, ಸ್ವಧರ್ಮನಿಷ್ಠರ ಪ್ರೇರಣೆಯಾಗಿರುವ ರಾಮನ ಆದರ್ಶಗಳ ಪಾಲನೆಯಿಂದ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯ ಎಂದು ಪ್ರೇರಣಾ ಫೌಂಡೇಶನ್ ಸಂಚಾಲಕ ಹಾಗೂ ಸಂಸ್ಕಾರ ಭಾರತಿ ಯುವ ವಿಭಾಗ ರಾಜ್ಯ ಕಾರ್ಯದರ್ಶಿ ಆದರ್ಶ ಗೋಖಲೆ ಅಭಿಪ್ರಾಯಪಟ್ಟರು.
ಅವರು ಆ. 5ರಂದು ಕೈಂಡ್‌ ಸಾಮಾಜಿಕ ಸೇವಾ ಸಂಸ್ಥೆ ಆಯೋಜಿಸಿದ ಅಯೋಧ್ಯೆ-ಸಿಂಹಾವಲೋಕನ ಫೇಸ್‌ಬುಕ್‌ ಲೈವ್ ಕಾರ್ಯಕ್ರಮದಲ್ಲಿ ಮಾತನಾಡಿ, ಡಿಪಿ, ಸ್ಟೇಟಸ್ ಗಳಲ್ಲಿರುವ ರಾಮನನ್ನು ಹೃದಯದರಸನನ್ನಾಗಿ ಮಾಡಿ ನಡೆನುಡಿಗಳೆರಡರಲ್ಲೂ ರಾಮತ್ವದ ಆ ರಾಮವನ್ನು ಹೊಂದುವುದೇ ಇಂದಿನ ಅಗತ್ಯತೆ. ನಾಲ್ಕು ಲಕ್ಷ ರಾಮಯೋಧರ ತ್ಯಾಗ-ಬಲಿದಾನ, ಎಂಭತ್ತಕ್ಕೂ ಹೆಚ್ಚು ಯುದ್ಧ, ನಿರಂತರ ಕಾನೂನು ಹೋರಾಟದ ಫಲವಾಗಿ ನಾವು ಕಾಣಲಿರುವ ಆಚಂದ್ರಾರ್ಕ ಮಂದಿರದ ಹಿನ್ನೆಲೆಯಲ್ಲಿ ಪಿತೃಪ್ರೇಮ, ಸತಿಸಖ್ಯ, ಭ್ರಾತೃವಾತ್ಸಲ್ಯ ಮೊದಲಾದ ರಾಮನ ಉನ್ನತ ಗುಣಗಳನ್ನು ಅಳವಡಿಸುವ ಮೂಲಕ ಬದುಕನ್ನು ಸಾರ್ಥಕಪಡಿಸಬೇಕು ಎಂದರು.












































error: Content is protected !!
Scroll to Top