ಮುಂಬಯಿ, ಆ.7: ಕಿರುತೆರೆ ನಟ ಸಮೀರ್ ಶರ್ಮ (40) ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೆ ಇನ್ನೋರ್ವ ನಟಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂದಿದೆ. ಭೋಜಪುರಿ ನಟಿ ಅನುಪಮಾ ಪಾಠಕ್ ದಹಿಸರ್ ನಲ್ಲಿರುವ ತನ್ನ ಫ್ಲ್ಯಾಟಿನಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಪತ್ರವೊಂದನ್ನು ಬರೆದಿಟ್ಟಿದ್ದಾರೆ.
ಆ.2ರಂದೇ ಅನುಪಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುಂಚಿತವಾಗಿ ಅವರು ಫೇಸ್ಬುಕ್ ಲೈವ್ ನಲ್ಲಿಒಂದು ವೀಡಿಯೊ ಹಾಕಿದ್ದು ಅದರಲ್ಲಿ ಯಾರನ್ನೂ ನಂಬಬೇಡಿ ಎಂದು ತನ್ನ ಆತ್ಮೀಯರಿಗೆಲ್ಲ ಮನವಿ ಮಾಡಿಕೊಂಡಿದ್ದಾರೆ.