ಕಾಶಿ, ಮಥುರಾ ವಿಮೋಚನೆಯಾಗಲಿ : ಈಶ್ವರಪ್ಪ

ಬೆಂಗಳೂರು, ಆ. 6: ಅಯೋಧ್ಯೆಯಲ್ಲಿ ರಾಮ ಮಂದಿರ  ವಿಮೋಚನೆಯಾದ ಮಾದರಿಯಲ್ಲೇ ಕಾಶಿ  ಮತ್ತು ವಿಮೋಚನೆಯಾಗಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ೀಶ್ವರಪ್ಪ ಹೇಳಿದ್ದರೆ.

ಕಾಶಿ, ಮಥುರಾಕ್ಕೆ  ದೇವರ ದರ್ಶನಕ್ಕೆ ತೆರಳಿದರೆ ನಾವು ಗುಲಾಮರಂತೆ ಭಾಸವಾಗುತ್ತದೆ. ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮ್ಮಲ್ಲಿ  ಗುಲಾಮರು ಎಂಬ ಭಾವನೆ ಉಂಟು ಮಾಡುತ್ತವೆ ಎಂದು  ಸಚಿವ  ಈಶ್ವರಪ್ಪ ಹೇಳಿದ್ದಾರೆ.
ಅಯೋಧ್ಯೆಯ ರೀತಿಯಲ್ಲಿಯೇ, ಅಲ್ಲಿನ ಮಸೀದಿಗಳನ್ನು ತೆರವುಗೊಳಿಸಿಯೇ ತೀರುತ್ತೇವೆ. ಶ್ರದ್ಧಾ ಕೇಂದ್ರಗಳಲ್ಲಿ ನಮ್ಮ ದೇವಸ್ಥಾನಗಳು ಧ್ವಂಸವಾಗಿರುವುದನ್ನು ನಾವು ಕಾಣುತ್ತೇವೆ. ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಮಸೀದಿ ತೆರವುಗೊಳಿಸಲಾಗಿದೆ.ಅದೇ ರೀತಿ ಎಲ್ಲ  ಶ್ರದ್ಧಾ  ಕೇಂದ್ರಗಳು  ಮಸೀದಿ ಮುಕ್ತವಾಗಬೇಕಿದೆ. ಲಾಠಿ ಗೋಲಿ ಖಾಯೆಂಗೆ ಮಂದಿರ್ ವಹೀ ಬನಾಯೇಂಗೆ ಎಂದು ಹೇಳಿದ್ದ ರೀತಿಯಲ್ಲಿಯೇ ಇಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ  ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

 





























































error: Content is protected !!
Scroll to Top