
ಮೇಷ : ಈ ದಿನ ಮೌನಧಾರಿಗಳಾಗಿ ಇದ್ದರೆ ಬಹಳ ಒಳ್ಳೇದು .ನೀವು ಮಾಡಬೇಕಾದ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದು ಉತ್ತಮ. ಸಮಾಜದಲ್ಲಿ ನಿಮ್ಮ ಗೌರವವನ್ನು ಗುರು ಕೇತು ಹೆಚ್ಚಿಸಲಿದ್ದಾರೆ. ಮಹಾ ಸುಧರ್ಶನ ಯಂತ್ರ ಧಾರಣೆ ನಿಮಗೆ ಅವಶ್ಯವಿದೆ.
ವೃಷಭ: ಈ ದಿನ ಮನೆಯಲ್ಲಿ ನಡೆಯಲಿರುವ ಅನಗತ್ಯ ಕಿರಿಕಿರಿಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ .ಗುರು ಕೇತು ಅಷ್ಟಮದಲ್ಲಿ ಇರುವುದರಿಂದ ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಹೇಳಿರಿ .ಇದರಿಂದ ನಿಮ್ಮ ಯಾವುದೇ ಸಮಸ್ಯೆಗಳು ಪರಿಹಾರವಾಗಲಿದೆ .ನೆರೆಹೊರೆಯವರೊಡನೆ ಎಚ್ಚರಿಕೆಯ ಹೆಜ್ಜೆ ಇಡಿರಿ.
ಮಿಥುನ : ಅಷ್ಟಮದ ಶನಿ ಒಮ್ಮೊಮ್ಮೆ ಜೀವನದಲ್ಲಿಯೇ ದಾರಿ ತೋರುತ್ತಿಲ್ಲವಲ್ಲ ಎಂಬ ನಿರಾಶೆಯನ್ನು ಮೂಡಿಸಬಹುದು. ಆದರೆ ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ ಎಲ್ಲವೂ ಪರಿಹಾರವಾಗಲಿದೆ. ಆಗ ಜನರು ನಿಮ್ಮಲ್ಲಿರುವ ಪ್ರಾಮಾಣಿಕತೆಯನ್ನು ಮೆಚ್ಚಲಿದ್ದಾರೆ ಸಪ್ತಮದಲ್ಲಿರುವ ಗುರು ಕೇತು ವಿವಾಹ ವಾಗಲಿರುವವರಿಗೆ ಅವಕಾಶವನ್ನು ನೀಡಲಿದ್ದಾರೆ .
ಕರ್ಕಾಟಕ: ಅಷ್ಟಮಾಧಿಪತಿ ಶನಿ ಸಪ್ತಮದಲ್ಲಿ ಇರುವಾಗ ಪ್ರೇಮಿಗಳು ಎಚ್ಚರವಾಗಿರಬೇಕು ಎಂಬುದನ್ನೂ ಸೂಚಿಸುತ್ತದೆ .ಖರ್ಚು ಮಾಡುವಾಗ ಜಾಗ್ರತೆಯಾಗಿರಲಿ . ನಿಮ್ಮ ಮೃಧುಮನಸ್ಸು ಯಾವಾಗಲೂ ಕೆಲಸ ಮಾಡುವುದಿಲ್ಲ ಸ್ವಲ್ಪ ಎತ್ತರದ ದ್ಧ್ವನಿಯಲ್ಲಿ ಮಾತಾಡಿ .ದೇವಿ ದುರ್ಗಪರಮೇಶ್ವರಿ ಕ್ಷೇತ್ರದಲ್ಲಿ ಮಾಂಗಲ್ಯ ವಸ್ತುಗಳನ್ನು ಅರ್ಪಿಸಿರಿ .
ಸಿಂಹ:ಭಾಗ್ಯ ಸ್ಥಾನದಲ್ಲಿ ಕುಜನಿರುವುದರಿಂದ ನಿಮ್ಮ ತಂದೆಯವರ ವಿಷಯದಲ್ಲಿ ನಿಮ್ಮ ಗಮನವಿರಲಿ .ಭೂಮಿಯ ಬಗ್ಗೆ ಜಗಳ ಬೇಡ. ನಾಗ ದೇವರನ್ನು ಪ್ರಾರ್ಥಿಸಿರಿ. ಪಂಚಮದಲ್ಲಿ ಗುರು ಕೇತು ಇರುವುದರಿಂದ ನಿಮ್ಮ ಕನಸುಗಳೆಲ್ಲ ನನಸಾಗುವ ದಾರಿಯಲ್ಲಿವೆ. ಸಂತಾನದ ನಿರೀಕ್ಷೆಯಲ್ಲಿರುವವರಿಗೆ ಆಸೆ ನೆರವೇರಲಿದೆ. ಮಂಗಳಕಾರ್ಯ ನೆರವೇರಲಿದೆ .
ಕನ್ಯಾ : ಮಕ್ಕಳಿಗೆ ಮೃಧು ಮಾತುಗಳಿಂದಲೇ ಮಾತನಾಡಿಸಿರಿ. ತಾಯಿಯವರ ಆರೋಗ್ಯದ ಬಗ್ಗೆ ನಿಮ್ಮ ಗಮನ ಬೇಕು. ಮನಸಿಕವಾಗಿ ಕುಗ್ಗಿ ಹೋಗುವ ಸಾದ್ಯತೆ ಇದೆ. ವೈದ್ಯರ ಸಲಹೆ ಅವಶ್ಯ ವಿದ್ದರೆ ಪಡೆದುಕೊಳ್ಳಿರಿ. ಹೊಸ ಮನೆ ವಾಹನ ಖರೀದಿ ಮಾಡುವ ಚಿಂತನೆ ನಡೆಯಲಿದೆ .
ತುಲಾ: ಸಪ್ತಮದಲ್ಲಿ ಕುಜನಿದ್ದಾನೆ. ಸುಖ ಸ್ಥಾನದಲ್ಲಿ ಶನಿಯಿದ್ದಾನೆ . ಈಶ್ವರ ಕ್ಷೇತ್ರದಲ್ಲಿ ಎಳ್ಳೆಣ್ಣೆ ರುದ್ರಾಭಿಷೇಕ ಮಾಡಿಸಿ ಕೊಳ್ಳಿರಿ .108 ಬಾರಿ ಪ್ರತಿನಿತ್ಯ ಓಂ ನಮ: ಶಿವಾಯ ಹೇಳುತ್ತಾ ಬನ್ನಿರಿ. ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ ಮಾಡಿರಿ.
ವೃಶ್ಚಿಕ: ಗುರು ಕೇತು ದ್ವಿತೀಯದಲ್ಲಿ ಇರುವುದರಿಂದ ವಿವಾಹ ವಾಗಲು ತಯಾರಿ ನಡೆಸಿರುವವರು ಬಹಳ ಸಂತೋಷದಿಂದ ನಡೆಸಿರಿ,. ಆರೋಗ್ಯದ ವಿಷಯದಲ್ಲಿ ಹೊರಗಿನ ಆಹಾರ ಸೇವಿಸದೆ ಇರುವುದೇ ಒಳ್ಳೆಯದು. ಕೃಷಿಕರು ಹೆಚ್ಚು ಲಾಭ ಗಳಿಸಲಿದ್ದಾರೆ. ನಿಮಗೆ ಹಿತ ಶತ್ರು ಗಳು ಅಧಿಕ ವಾಗಿ ಇರುವುದರಿಂದ ಪಾಶುಪತ. ಮಂತ್ರ ವನ್ನು ಗುರುಗಳ ಉಪದೇಶ ಪಡೆದು ಹೇಳಿರಿ .
ಧನು: ಗುರುಕೇತು ಜನ್ಮದಲ್ಲಿ ಇರುವುದರಿಂದ ಸೋಮಾರಿತನ ನಿಮ್ಮನ್ನು ಕಾಡಲಿದೆ .ವಿವಾಹದ ತಯಾರಿಯಲ್ಲಿರುವವರಿಗೆ ಸ್ವಲ್ಪ ತಕರಾರಿನೊಂದಿಗೆ ವಿವಾಹ ನಡೆಯಲಿದೆ .ವರದಕ್ಷಿಣೆ ಯ ವಿಷಯದಲ್ಲಿ ಶನಿ ವಾದ ವಿವಾದವನ್ನು ತರಲಿದ್ದಾಾನ. ವಿಷ್ಣು ದೇವರನ್ನು ಪ್ರಾರ್ಥಿಸಿರಿ .ರಾಜಕೀಯ ವ್ಯಕ್ತಿಗಳಿಗೆ ನೆಮ್ಮದಿಯ ದಿನಗಳು .
ಮಕರ: ಗುರು ಕೇತು ವ್ಯಯ ದಲ್ಲಿ ಹಾಗೆಯೇ ಶನಿ ಜನ್ಮದಲ್ಲಿ ಇರುವುದರಿಂದ ಯಾವುದೇ ಮಹತ್ತರವಾದ ಕೆಲಸವನ್ನು ಮಾಡುವ ಮೊದಲು ನಿಮ್ಮ ಕುಲದೇವರನ್ನು ಪ್ರಾರ್ಥಿಸಿಕೊಳ್ಳಿರಿ .ಕುಜ ಚತುರ್ಥದಲ್ಲಿ ಇರುವುದರಿಂದ ನಾಗ ದೇವರ ಪ್ರಾರ್ಥನೆ ಅತೀ ಅಗತ್ಯವಿದೆ .ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ .ಭೂಮಿಗೆ ಸಂಬಂಧಿಸಿ ವಾದ ಪ್ರತಿವಾದ ಬರದಂತೆ ಎಚ್ಚರವಹಿಸಿ .
ಕುಂಭ:; ಉತ್ತಮವಾದ ಆರೋಗ್ಯ ಉಲ್ಲಾಸಭರಿತ ಮನಸ್ಸು ಇದ್ದು ಮನೆಯಲ್ಲಿ ಮಂಗಳ ಕಾರ್ಯ ನಡೆಯಲಿದೆ . ಶನಿ ವ್ಯಯ ದಲ್ಲಿರುವುದರಿಂದ ಸ್ವಲ್ಪ ಅಡಚಣೆ ಬರಲಿರುವುದರಿಂದ ಈಶ್ವರ ದೇವರಿಗೆ ರುದ್ರಾಭಿಶೇಕ ಪ್ರಾರ್ಥನೆ ನಡೆಸಿ ಪೂರ್ಣ ತಯಾರಿಯೊಂದಿಗೆ ಮುನ್ನೆಡಿಯಿರಿ . ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೊಂದರೆ ತಂದುಕೊಳ್ಳಬೇಡಿರಿ .
ಮೀನ: ಶನಿ ನಿಮ್ಮ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಧನಾಗಮನ ಬಹಳ ಉತ್ತಮವಾಗಿ ಇರಲಿದೆ. ನೀವು ಮಾಡುವ ಉದ್ಯೋಗ ಕ್ಷೇತ್ರದಲ್ಲಿ ಎಚ್ಚರಿಕೆಯ ಹೆಜ್ಜೆ ಅತೀ ಅಗತ್ಯ . ನಿಮ್ಮಲ್ಲಿ ಹಣ ಇರುವುದನ್ನು ಗಮನಿಸಿರುವ ನಿಮ್ಮ ಹಿತಶತ್ರುಗಳು ಸಾಲ ಕೇಳಲು ಬರುತ್ತಾರೆ. ಸಾಲ ಕೊಡಬೇಡಿ. ಜಾಮೀನು ಸಹಿ ಮಾಡಬೇಡಿ. ವಿದೇಶ ಯಾತ್ರಾ ಯೋಗವಿದೆ.
ಕೆ. ಸುಬ್ರಹ್ಮಣ್ಯ ಆಚಾರ್ಯ
9741489529