ಶಕುಂತಳಾ ದೇವಿಯವರಿಗೆ 40 ವರ್ಷದ ಬಳಿಕ ಸಿಕ್ಕಿತು ಗಿನ್ನೆಸ್‌ ಮನ್ನಣೆ

ಲಂಡನ್, ಜು. 31 : ಅತಿವೇಗದ ಮಾನವ ಕಂಪ್ಯೂಟರ್‌ ಎಂದೇ ಖ್ಯಾತರಾಗಿದ್ದ ಕರ್ನಾಟಕದ ಗಣಿತ ತಜ್ಞೆ ಶಕುಂತಳಾ ದೇವಿ ಅವರಿಗೆ ಅವರು ತೀರಿಕೊಂಡ 7 ವರ್ಷಗಳ ಬಳಿಕ  ಗಿನ್ನೆಸ್‌ ದಾಖಲೆಯೊಂದು ಅರ್ಪಣೆಯಾಗಿದೆ. ಗುರುವಾರ ಅವರ ಪುತ್ರಿ ಅನುಪಮಾ ಈ ಗಿನ್ನೆಸ್‌ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ. 40 ವರ್ಷದ ಹಿಂದೆ ಲಂಡನ್ ನ ಇಂಪೀರಿಯಲ್‌ ಕಾಲೇಜಿನಲ್ಲಿ ಶಕುಂತಳಾ ದೇವಿಯವರು 13 ಅಂಕೆಗಳ ಎರಡು ಸಂಖ್ಯೆಗಳನ್ನು 28 ಸೆಕೆಂಡುಗಳಲ್ಲಿ ಗುಣಿಸಿ ದಾಖಲೆ ನಿರ್ಮಿಸಿದ್ದರು. ಆ  ಸಾಧನೆ 1982ರ ಗಿನ್ನೆಸ್‌ ಆವೃತ್ತಿಗೆ ಸೇರ್ಪಡೆಯಾಗಿದ್ದರೂ ಕೆಲ ಆಕ್ಷೇಪಗಳಿಂದಾಗಿ ಶಕುಂತಳಾ ದೇವಿಯವರಿಗೆ ಗಿನ್ನೆಸ್‌ ದಾಖಲೆಯ ಪ್ರಮಾಣಪತ್ರ ದೊರೆತಿರಲಿಲ್ಲ. ಈ ಮೂಲಕ  ಕನ್ನಡದ ಒಂದು ಪ್ರತಿಭೆಗೆ ತಡವಾಗಿಯಾದರೂ ಜಾಗತಿಕ ಮನ್ನಣೆ  ದೊರೆತಂತಾಗಿದೆ.





























































error: Content is protected !!
Scroll to Top