
ನಿಟ್ಟೆ , ಜು. 31 : ವಿಶ್ವಹಿಂದು ಪರಿಷತ್ ಬಜರಂಗದಳ ನಿಟ್ಟೆ ವಲಯ ಸತ್ಯ ಸಾರಮಣಿ ಘಟಕ ಎರ್ಮಂಜ ಪಲ್ಲ ನಿಟ್ಟೆ ಇದರ ಕಾರ್ಯಕರ್ತರು ಶ್ರೀ ಸತ್ಯ ಸಾರಮಣಿ ದೈವಸ್ಥಾನದ ಸಮೀಪ ನೂತನವಾಗಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದ ವೃತ್ತ ಧ್ವಜಕಟ್ಟೆಯನ್ನು ರಾಜ್ಯ ಬಜರಂಗದಳ ಸಂಚಾಲಕ ಸುನೀಲ್ ಕೆ.ಆರ್ ಹಾಗೂ ನಿಟ್ಟೆ ನಡಿಮನೆ ಬಿ.ಕೆ.ನಾಯಕ್ ಉದ್ಘಾಟಿಸಿದರು. ತಾಲೂಕು ಬಜರಂಗದಳ ಸಂಚಾಲಕ ಚೇತನ್ ಪೆರಲ್ಕ ಮಾತನಾಡಿ ಸ್ವಾಮಿ ವಿವೇಕಾನಂದರ ಹಿಂದುತ್ವದ ಪರಿಕಲ್ಪನೆಯನ್ನು ಮೈಗೂಡಿಸಿಕೊಂಡು ಹಿಂದುತ್ವವನ್ನು ಜಾಗ್ರತಗೊಳಿಸಬೇಕೆಂದು ಹೇಳಿದರು. ತಾಲೂಕು ಪ್ರಖಂಡ ಜಗದೀಶ್ ಪೂಜಾರಿ, ಉಪಾಧ್ಯಕ್ಷ ಶ್ರೀನಿವಾಸ ಶೆಟ್ಟಿ ಬೋಳ, ನಿಟ್ಟೆ ವಿಶ್ವಹಿಂದ್ ಪರಿಷದ್ ಅಧ್ಯಕ್ಷ ಪ್ರವೀಣ್ ದೇವಾಡಿಗ, ಸಾರಮಣಿ ಘಟಕದ ಸಂಚಾಲಕರು ವೆಂಕಟೇಶ್, ಕಾರ್ಯದರ್ಶಿ ಪ್ರದೀಪ್ ಪೂಜಾರಿ, ಉಪಾಧ್ಯಕ್ಷ ರತ್ನಾಕರ ನಿಟ್ಟೆ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು, ಪ್ರಶಾಂತ್ ಶೆಣೈ ನಿಟ್ಟೆ ಕಾರ್ಯಕ್ರಮ ನಿರೂಪಿಸಿದರು.