
ಬೆಂಗಳೂರು, ಜು. 31: ಕೊರೊನಾ ಪರಿಕರಗಳ ಖರೀದಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾನೂನು ನೊಟೀಸ್ ಜಾರಿಗೊಳಿಸಿದೆ.
ಕೊರೊನಾ ಪರಿಕರಗಳ ಖರೀದಿಯಲ್ಲಿ 2,000 ಕೋ.ರೂ.ಗೂ ಅಧಿಕ ಮೊತ್ತದ ಹಗರಣವಾಗಿದ್ದು, ಇದರ ನ್ಯಾಯಾಂಗ ತನಿಖೆಯಾಗಬೇಕೆಂದು ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದ ವಾರ ಆರೋಪಿಸಿದ್ದರು.
ಇದು ಹುರುಳಿಲ್ಲದ ಸುಳ್ಳು ಅರೋಪ ಎಂಬುದಾಗಿ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಎನ್. ಅವರು ವಕೀಲರ ಮೂಲಕ ಬಿಜೆಪಿ ನೊಟೀಸ್ ಕಳುಹಿಸಿದೆ.
ಪಕ್ಷದ ವರ್ಚಸ್ಸಿಗೆ ಹಾನಿ ಮಾಡುವ ಉದ್ದೇಶದಿಂದಲೇ ವಿಪಕ್ಷ ನಾಯಕರು ಈ ಸುಳ್ಳು ಆರೋಪಗಳನ್ನು ಮಾಡಿದೆ ಎಂದು ಬಿಜೆಪಿ ಹೇಳಿದೆ.