ಕೋತ್ವಾಲ್‌ ಸಂಸ್ಕೃತಿ ಬಿಡಿ : ಡಿಕೆಶಿಗೆ ಯೋಗೇಶ್ವರ್‌ ತಿರುಗೇಟು

ರಾಮನಗರ, ಜು. 31 :ತನ್ನ ವಿರುದ್ಧ ಟೀಕೆ ಮಾಡಿರುವ  ಡಿಕೆ ಶಿವಕುಮಾರ್ಗೆ ಮಾತಿನಲ್ಲೇ ತಿರುಗೇಟು ನೀಡಿರುವ ಬಿಜೆಪಿಯ ಸಿಪಿ ಯೋಗೇಶ್ವರ್ , ನನ್ನ  ಮತ್ತು ಪಕ್ಷದ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಬಿಟ್ಟುಬಿಡಿ.  ಇನ್ನು ಮುಂದಾದರೂ ಕೊತ್ವಾಲ್ ರಾಮಚಂದ್ರನ ಸಂಸ್ಕೃತಿಯಿಂದ ಹೊರಬರಬಂದು ಗೌರವಯುತವಾಗಿ ಮಾತನಾಡುವುದನ್ನು ಕಲಿಯಿರಿ ಎಂದಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿರುವ  ಸಿ.ಪಿ.ಯೋಗೇಶ್ವರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಮಾಡಿ ಸ್ಪಷ್ಟನೆ ನೀಡುವುದರ ಜೊತೆಗೆ ತಿರುಗೇಟು ನೀಡಿದ್ದಾರೆ. ನಾನು ಡಿ.ಕೆ.ಶಿವಕುಮಾರ್ ಕಾಲು ಹಿಡಿದಿಲ್ಲ. ಅಂತಹ ಸಂದರ್ಭ ನನಗೆ ಬರುವುದೂ ಇಲ್ಲ. ಕೆಪಿಸಿಸಿ ಹುದ್ದೆಗೆ ಅವರು ಅಗೌರವ ತರಬಾರದು ಎಂದು ವ್ಯಂಗ್ಯವಾಡಿದ್ದಾರೆ.

ಆರು  ತಿಂಗಳ ಹಿಂದೆಯೇ ನನ್ನನ್ನು ಎಂಎಲ್​ಸಿ ಮಾಡುವುದು ಗೊತ್ತಿತ್ತು. ನಾನು ಸರ್ಕಾರ ಕೆಡವಲು ಯಾವುದೇ ಪ್ರಯತ್ನ ಮಾಡಿಲ್ಲ. ಆದರೆ, ಶಿವಕುಮಾರ್ ಮತ್ತು ಸಹೋದರ ಸುರೇಶ್ ಸುಳ್ಳು ಹೇಳುತ್ತಿದ್ದಾರೆ ಎಂದು ಸಿ.ಪಿ.ಯೋಗೇಶ್ವರ್ ಡಿಕೆಶಿ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.

error: Content is protected !!
Scroll to Top