ಬಿಲ್ಲು-ಬಾಣ ಹಿಡಿದ ರಾಮ ಬೇಡ : ವೀರಪ್ಪ ಮೊಯ್ಲಿ ಸಲಹೆ

ಬೆಂಗಳೂರು, ಜು. 31:ಅಯೋಧ್ಯೆ ಮಂದಿರದ ಭೂಮಿ ಪೂಜೆ ದಿನ ಸನಿಹವಾಗುತ್ತಿರುವಂತೆಯೇ ಕೆಂದ್ರದ ಮಾಜಿ ಕಾನೂನು  ಸಚಿವ ವೀರಪ್ಪ ಮೊಯ್ಲಿ ಅವರು ಅಮೂಲ್ಯವಾದ ಸಲಹೆಯೊಂದನ್ನು ನೀಡಿದ್ದಾರೆ.  ಶ್ರೀರಾಮನ ಕೈಗಳಲ್ಲಿ ಆಯುಧಗಳಾದ ಬಿಲ್ಲು ಮತ್ತು ಬಾಣ ಇರುವ ಫೋಟೊಗಳನ್ನು ಹಲವೆಡೆ ಬಳಸಲಾಗುತ್ತಿದೆ. ಆದರೆ ಇದು ರಾಮ  ಆಕ್ರಮಣಶೀಲ ಮನೋಭಾವ ಹೊಂದಿದ್ದ ಎನ್ನುವಂತಿದೆ. ಆದರೆ ಆತ ಹಾಗಿರಲಿಲ್ಲ ಎಂದು ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ  ಹೇಳಿದ್ದಾರೆ.

ಬಿಲ್ಲು-ಬಾಣ ಹಿಡಿದ ರಾಮನ ಫೋಟೊ ಬದಲು ಪಟ್ಟಾಭಿಷಿಕ್ತ ರಾಮನ ಫೋಟೊ ಬಳಸುವುದು ಸೂಕ್ತ. ಸೀತೆ, ಲಕ್ಷ್ಮಣ, ಹನುಮಂತನಿರುವ ಪಟ್ಟಾಭಿಷೇಕದ ಚಿತ್ರ ಏಕತೆಯ ಪ್ರತೀಕವಾಗಿದೆ ಎಂದು ಮೊಯ್ಲಿ ಎಂದು ಮೊಯ್ಲಿ ಸಲಹೆ ಮಾಡಿದ್ದಾರೆ. ಅಲ್ಲದೇ ರಾಮ ಸೇತುವೆಗಳ ನಿರ್ಮಾಣದ ಮೂಲಕ ಸಮಾಜಕ್ಕೆ ಹಾಗೂ ಎಲ್ಲಾ ಸಮುದಾಯಕ್ಕೆ ಬೇಕಾಗಿರುವ ದೇವರಾಗಿದ್ದರು ಅವರು ಆಕ್ರಮಣಶೀಲ ಮನೋಭಾವ ಹೊಂದಿರಲಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ  ಮೋದಿ ಭೂಮಿ ಪೂಜೆಯನ್ನು  ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು , ಎಲ್ಲರನ್ನು  ಒಗ್ಗಟ್ಟಾಗಿಸುವಂತೆ ಮಾಡಬೇಕು. ಯಾಕೆಂದರೆ ರಾಮ ಎಲ್ಲಾ ಸಮುದಾಯಕ್ಕೆ ಸೇರಿದವನು ಎಂದು  ವೀರಪ್ಪ ಮೊಯ್ಲಿ ಹೇಳಿದ್ದಾರೆ. ರಾಮ ಎಲ್ಲಾ ಸಮುದಾಯಗಳಿರುವ ಸುಂದರ ಸಮಾಜದ ಕನಸು ಕಂಡವರು. ಕಾಂಗ್ರೆಸ್‌ ಕೂಡ ಯಾವತ್ತು ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ್ದಾರೆ.



































































































































































error: Content is protected !!
Scroll to Top