ದಿಲ್ಲಿ , ಜು. 26: ದೇಶದಲ್ಲಿ ಕೊರೊನಾ ವೈರಸ್ ಕಳವಳಕಾರಿಯಾಗಿ ಹೆಚ್ಚುತ್ತಿದ್ದರೂ ಸರಕಾರ ಇನ್ನೂ ಕೆಲವು ವಿನಾಯಿತಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಎರಡನೇ ಹಂತದ ಅನ್‌ಲಾಕ್ ಜು.31ಕ್ಕೆ ಮುಗಿಯುತ್ತದೆ. ಆ.1ರಿಂದ ಮೂರನೇ ಹಂತದ ಅನ್‌ಲಾಕ್ ಪ್ರಕ್ರಿಯೆ ಜಾರಿಗೆ ಬರಲಿದ್ದು ಈ ಸಂದರ್ಭದಲ್ಲಿ ಕೆಲವು ವಿನಾಯಿತಿಗಳು ಸಿಗುವ ಸಾಧ್ಯತೆಯಿದೆ.
ಸಿನೇಮಾ ಥಿಯೇಟರ್‌ಗಳನ್ನು ತೆರೆಯುವುದು ಸೇರಿ ಕೆಲವು ವಿನಾಯಿತಿಗಳನ್ನು ಸರಕಾರ ಮೂರನೇ ಹಂತದ ಲಾಕ್ ಡೌನ್ ತೆರವಿನಲ್ಲಿ ಘೋಷಿಸಲಿದೆ ಎನ್ನಲಾಗುತ್ತಿದೆ.
ಶಾಲೆ ಮತ್ತು ಮೆಟ್ರೊ ರೈಲುಗಳ ಸಂಚಾರ ಸ್ಥಗಿತ ಸೇರಿ ಕೆಲವು ನಿರ್ಬಂಧಗಳು ಮುಂದುವರಿಯಲಿವೆ. ಅಂತೆಯೇ ಮೆತರೊ ರೈಲಿ ಮತ್ತು ಲೋಕಲ್ ರಂಲಿನ ಮೇಲಿನ ನಿರ್ಭಂಧಗಳು ಮುಂದುವರಿಯುವ ಸಾಧ್ಯತೆಗಳಿವೆ. ಪರಿಸ್ಥಿತಿ ಪೂರ್ತಿಯಾಗಿ ನಿಯಂತ್ರಣಕ್ಕೆ ಬರುವ ತನಕ ಶಾಲೆಗಳು ಆರಂಭವಾಗುವ ಸಾಧ್ತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಲಾಕ್ ಡೌನ್ ತೆರವಿಗೆ ಸಂಬಂಧಿಸಿದಂತೆ ಮಾನವ ಸಂಪನ್ಮೂಲ ಸಚಿವಾಲಯ ರಾಜ್ಯಗಳ ಜೊತೆಗೆ ಸಮಾಲೋಚಿಸುತ್ತಿದೆ.