ದಿಲ್ಲಿ :ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಶಾಶ್ವತ ಕಮಿಶನ್ ಒದಗಿಸುವ ಪ್ರಸ್ತಾವಕ್ಕೆ ರಕ್ಷಣಾ ಇಲಾಖೆ ಅನುಮತಿ ನೀಡಿದೆ.ಇಂದು ಅನುಮತಿಯ ಔಪಚಾರಿಕ ಪತ್ರವನ್ನು ನೀಡಲಾಯಿತು. ಭಾರತೀಯ ಸೇನೆಯಲ್ಲಿರುವ ಎಲ್ಲ ಶಾರ್ಟ್ ಸರ್ವಿಸ್ ಕಮಿಶನ್ (ಎಸ್‌ಎಸ್‌ಸಿ) ಮಹಿಳಾ ಸಿಬಂದಿಗೆ ಶಾಶ್ವತ ಕಮಿಶನ್ ಒದಗಿಸುವ ಕುರಿತಂತೆ ಒಂದು ತಿಂಗಳಲ್ಲಿ ತಿಳಿಸಬೇಕೆಂದು ಆದೇಶಿಸಿತ್ತು.
ಕೇಂದ್ರ ಸರಕಾರದ ಈ ನಿರ್ಧಾರದಿಂದ ಮಹಿಳಾ ಯೋಧರ ಬೇಡಿಕೆಯೊಂದು ಈಡೇರಿದಂತಾಗಿದೆ ಮಾತ್ರವಲ್ಲ ಮಹಿಳಾ ಸಬಲೀಕರಣಕ್ಕೂ ದಾರಿಯಾಗಿದೆ ಎಂದು ರಕ್ಷಣಾ ಇಲಾಖೆ ಆದೇಶ ಬಿಡುಗಡಗೊಳಿಸಿ ಹೇಳಿದೆ.
ಭಾರತೀಯ ಸೇನೆ ಎಲ್ಲ ಹತ್ತು ವಿಭಾಗಗಳ ಮಹಿಳಾ ಸಿಬಂದಿಗೆ ಪರ್ಮನೆಂಟ್ ಕಮಿಶನ್ ಲಾಭ ಸಿಗಲಿದೆ. ಸೇನೆಯಲ್ಲಿ ತಮಗಾಗುತ್ತಿರುವ ತಾರತಮ್ಯದ ಬಗ್ಗೆ ಮಹಿಳಾ ಯೋಧರು ಧ್ವನಿ ಎತ್ತಿದ್ದರು.