ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು ಸರಕಾರದ ಮೇಲೆ ಮುಗಿಬಿದ್ದರು. ಮೆಡಿಕಲ್ ಕಿಟ್ ಖರೀದಿಯಲ್ಲಿ 2,000 ಕೋಟಿ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪ್ರತಿಪಕ್ಷ ನಾಯಕರು ಬಿಡುಗಡೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
ಸರ್ಕಾರಕ್ಕೆ ನಾವು ಸಹಕಾರ ಕೊಟ್ಟಿದ್ದೇವೆ. ಜನರ ಜೀವನಕ್ಕಾಗಿ ನಾವು ಸಹಕಾರ ನೀಡಿದ್ದೆವು .ಆದರೆ ನೀವು ಹೆಣದ ಮೇಲೆ ಹಣ ಮಾಡೋಕೆ ಹೊರಟಿದ್ದೀರ ಇದನ್ನ ನಾವು ನೋಡಿ ಸುಮ್ಮನೆ ಕೂರಬೇಕಾ? ಬೆಂಗಳೂರಿಗೆ ಅಷ್ಟದಿಕ್ಪಾಲಕರು ನೇಮಿಸಿದ್ದೀರ, ಒಬ್ಬೇ ಒಬ್ಬ ಸಚಿವ ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ, ಹೆಣವನ್ನು ಯಾವ ರೀತಿ ನೋಡಿದ್ರಿ, ಸಂಸ್ಕಾರವನ್ನು ಸರಿಯಾದ ರೀತಿ ಮಾಡಿದ್ರಾ? ಜನರಿಗೆ ಸೋಂಕನ್ನೂ ಹಂಚಿದಿರಿ, ಹಾಗೆಯೇ ಭ್ರಷ್ಟಾಚಾರದ ಸೋಂಕನ್ನು ಹರಡಿದ್ದೀರಿ ಎಂದು ಡಿಕೆಶಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಓತ್ತಾಯಿಸಿದ ಬಳಿಎ ಸರ್ವಪಕ್ಷ ಸಭೆ ಕರೆಯಲಾಯಿತು. ಸರ್ಕಾರದ ಫುಡ್ಕಿಟ್ನಲ್ಲಿ ಫೋಟೋ ಹಾಕಿಕೊಂಡ್ರಿ, ಬಾಣಂತಿಯರ ಆಹಾರವನ್ನೂ ನುಂಗಿ ನೀರು ಕುಡಿದ್ರಿ, ನಿಮಗೆ ನಾಚಿಕೆ ಆಗಲ್ವೇ? ನಾಲ್ಕು ಮೂಸಂಬಿ ಕೊಟ್ಟು ವಲಸಿಗರನ್ನು ಕಳಿಸಿದ್ರಿ, ಎಷ್ಟು ಜನಕ್ಕೆ ಕಿಟ್, ಮಾಸ್ಕ್ ಕೊಟ್ರಿ ಲೆಕ್ಕಕೊಡಿ? ಬರೀ ಹಣ ಲೂಟಿ ಮಾಡಿದ್ದೇ ನಿಮ್ಮ ಸಾಧನೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಮಿಕರನ್ನ ಹೇಗೆ ನಡೆಸಿಕೊಂಡಿದ್ದೀರಿ ಎನ್ನುವುದನ್ನು ಇಡೀ ಜಗತ್ತು ನೋಡಿದೆ. , ಬೆಂಗಳೂರು ಕಟ್ಟಲು ಬಂದವರನ್ನು ಬರಿಗೈಲಿ ಕಳಿಸಿದ್ದೀರಿ, ಅನ್ನ ಕೊಟ್ಟ ಭೂಮಿ ನಮ್ಮ ಕರ್ನಾಟಕ. ಅದರ ಹೆಸರನ್ನ ಹಾಳು ಮಾಡಿಬಿಟ್ರಿ .ಬೆಳಗ್ಗೆಯಿಂದ ಸಂಜೆಯವರೆಗೆ ದುಡ್ಡು ಹೊಡೆದಿದ್ದೇ ಸಾಧನೆ ಎಂದು ಬಿಜೆಪಿ ಸರ್ಕಾರ ವಿರುದ್ದ ಗುಡುಗಿದರು.