ಉಡುಪಿ ಜಿಲ್ಲೆ ಗಡಿ ಸೀಲ್‌ಡೌನ್‌ 6 ದಿನ ಮೊದಲೇ ತೆರವು

ಉಡುಪಿ: ಕೊರೊನಾ ವೈರಸ್‌ ಪ್ರಸರಣವನ್ನು ತಡೆಯುವ ಸಲುವಾಗಿ  ಉಡುಪಿ ಜಿಲ್ಲೆಯಲ್ಲಿ ಜು. 15ರ ರಾತ್ರಿ 8ಗಂಟೆಯಿಂದ ಜು. 29ರ ವರೆಗೆ ಜಿಲ್ಲಾ ಗಡಿಗಳ ಸೀಲ್‌ಡೌನ್ ಮಾಡಿ ಹೊರಡಿಸಿದ ಆದೇಶವನ್ನು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್‌ ಆರು ದಿನ ಮೊದಲೇ  ಹಿಂಪಡೆದಿದ್ದಾರೆ.

ಜಿಲ್ಲಾಧಿಕಾರಿ ಅವರು ನಿನ್ನೆ ರಾತ್ರಿ ಸೀಲ್‌ಡೌನ್ ಅನ್ನು ತೆರವುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಆದಾಗ್ಯೂ ಜಿಲ್ಲೆಯ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳು ಮುಂದುವರಿಯುತ್ತವೆ. ಅನಗತ್ಯವಾಗಿ ಉಡುಪಿ ಜಿಲ್ಲೆಗೆ ಬರಲು ಅವಕಾಶ ಇರುವುದಿಲ್ಲ. ಅಗತ್ಯ ಕೆಲಸಗಳಿಗೆ ಜಿಲ್ಲೆಗೆ ಆಗಮಿಸುವವರು ಈ ಬಗ್ಗೆ ದಾಖಲೆಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲನೆಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಜಗದೀಶ ಅವರು ಆದೇಶದಲ್ಲಿ ತಿಳಿಸಿದ್ದಾರೆ.error: Content is protected !!
Scroll to Top