ಈ ರಾಜ್ಯದಲ್ಲಿ ಮಾಸ್ಕ್‌ ಧರಿಸದಿದ್ದರೆ 1 ಲ.ರೂ.ದಂಡ!

ರಾಂಚಿ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಸ್ಕ್‌ ಧರಿಸಬೇಕೆಂದು ಸರಕಾರ, ವೈದ್ಯರು, ತಜ್ಞರಾದಿಯಾಗಿ ಎಲ್ಲರೂ ಪರಿಪರಿಯಾಗಿ ಹೇಳುತ್ತಿದ್ದರು ಜನರು ಈಗಲೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಕು  ಹರಡುವುದನ್ನು  ತಡೆಗಟ್ಟುವ ನಿಟ್ಟಿನಲ್ಲಿ ಜಾರ್ಖಂಡ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.ಲಾಕ್ ಡೌನ್ ನಿಯಮ ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಮಾಸ್ಕ್ ಧರಿಸದವರಿಗೆ 1 ಲಕ್ಷ ರೂ. ದಂಡ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.  

ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು 12 ಲಕ್ಷ ಗಡಿ ದಾಟಿದ್ದು, ಲಸಿಕೆ ಬರುವವರೆಗೂ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಲೇ ಇರಬೇಕಾಗುತ್ತದೆ.  ಜನರು ಸ್ವಯಂ ಜಾಗ್ರತೆ ವಹಿಸದ ಹೊರತು ಸೋಂಕು ನಿಯಂತ್ರಣಕ್ಕೆ ಬರುವುದು ಅಸಾಧ್ಯ.

ದೇಶದಲ್ಲಿ ನಿತ್ಯ 40,000ದಂತೆ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.ಹೀಗಾಗಿ ಜನರು ಈಗ ಗರಿಷ್ಠ ಎಚ್ಚರಿಕೆಯಿಂದ ಇರುವ ಅಗತ್ಯವಿದೆ.ಅನಗತ್ಯ ಓಡಾಟಗಳನಗನು ಮಾಡದಿರುವುದು, ಗುಂಪುಗೂಡುವುದನ್ನು ತಪ್ಪಿಸುವುದು, ಹೊರಗೆ ಹೋಗುವಾಗ ಮಾಸ್ಕ್‌ ಧರಿಸುವುದು, ಆಗಾಗ ಕೈ ತೊಳೆಯುದು ಇವೆಲ್ಲ ಪಾಲಿಸಲೇ ಬೇಕಾದ ನಿಯಮಗಳು.

error: Content is protected !!
Scroll to Top