ಬೆಂಗಳೂರು :ನಗರದ ಖಾಸಗಿ ಆಸ್ಪತ್ರೆಯೊಂದು ಕೊರೊನಾ ಸೋಂಕಿತ ಮಹಿಳಾ ರೋಗಿಗಳು ದುಪಟ್ಟಾ ಹಾಗೂ ಈ ಮಾದರಿಯ ಬೇರೆ ಉಡುಪು ಧರಿಸುವುದನ್ನು ನಿಷೇಧಿಸಿದೆ. ಕೊರೊನಾಕ್ಕೂ ದುಪಟ್ಟಾಕ್ಕೂ ಏನು ಸಂಬಂಧ ಎಂದು ಆಶ್ಚರ್ಯವಾಯಿತು.
ಇದಕ್ಕೆ ಕಾರಣವಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಾಗಿದ್ದ ಇಬ್ಬರು ಮಹಿಳೆಯರು ದುಪಟ್ಟಾ ಬಳಸಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಸ್ಪತ್ರೆ ಆಡಳಿತ ಈ ಮುನ್ನೆಚ್ಚರಿಕೆ ತೆಗೆದುಕೊಂಡಿದೆ.
ಮಹಿಳಾ ಕೊರೊನಾ ಸೋಂಕಿತರು ಆಪರೇಶನ್ ಸಂದರ್ಭದಲ್ಲಿ ಧರಿಸುವ ಗೌನ್ ಮಾತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇದಕ್ಕೆ ಕೆಲವು ಹಿರಿಯ ಮಹಿಳೆಯರು ಆಕ್ಷೇಪ ಎತ್ತಿದ್ದಾರೆ.
ಇಷ್ಟು ಮಾತ್ರವಲ್ಲದೆ ಕೊರೊನಾ ರೋಗಿಗಳನ್ನು ಒಬ್ಬಂಟಿಯಾಗಿ ಎಲ್ಲಿಗೂ ಹೋಗಲು ಬಿಡಬಾರದು. ಶೌಚಾಲಯಕ್ಕೆ ಹೋಗುವಾಗಲೂ ಯಾರಾದರೊಬ್ಬರು ಜೊತೆಗಾರರು ಇರಬೇಕೆಂದು ಆಸ್ಪತ್ರೆ ನಿಯಮಗಳನ್ನು ಮಾಡಿದೆ.