ಉಗ್ರ ಬೆಂಬಲಿಗರ ಜೊತೆಗೆ ಶಾರೂಕ್‌ ದಂಪತಿ ಫೊಟೊ ಬೆಳಕಿಗೆ :ಬಾಲಿವುಡ್‌ನಲ್ಲಿ ತಲ್ಲಣ

ಮುಂಬಯಿ: ಬಾಲಿವುಡ್ ನ ಕೆಲವು ಪ್ರಸಿದ್ಧ ವ್ಯಕ್ತಿಗಳು  ಪಾಕಿಸ್ಥಾನದ ಕುಖ್ಯಾತ ಗುಪ್ತಚರ ಪತೆ ಐಎಸ್‌ಐ ಮತ್ತು ಸೇನೆಯ ಜೊತೆ ಸಂಬಂಧ ಇರಿಸಿಕೊಂಡಿರುವುದಕ್ಕೆ ಬಿವಾದ ಸಾಕ್ಷ್ಯಗಳಿವೆ ಎಂದು ಬಿಜೆಪಿಯ ಹಿರಿಯ ನಾಯಕ ಜಯ್‌ ಪಾಂಡ ಹೇಳಿದ ಬೆನ್ನಿಗೆ ಇದಕ್ಕೆ ಸಂಬಂಧಿಸಿದ ಪುರಾವೆ ಬೆಳಕಿಗೆ ಬಂದಿದೆ.

ಖ್ಯಾತ ನಟ ಶಾರೂಕ್‌ ಖಾನ್‌  ಮತ್ತು ಅವರ ಪತ್ನಿ ಗೌರಿ ಖಾನ್‌  ಪಾಕಿಸ್ಥಾನದ ಕೆಲವು ವಿವಾದಾತ್ಮಕ ವ್ಯಕ್ತಿಗಳ ಜೊತೆಗಿರುವ  ಫೋಟೊಗಳು ಬಹಿರಂಗವಾಗಿ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಯಾಗಿದೆ.  ಭಾರತ ವಿರೋಧಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಹಾಗೂ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಅರೋಪವಿರುವ ಪಾಕಿಸ್ಥಾನಿ ಮೂಲದ ರೆಹಾನ್‌ ಸಿದ್ದಿಕಿ ಮತ್ತು ಟೋನಿ ಅಶೈ ಎಂಬವರ ಜೊತೆಗೆ ಖಾನ್‌ ದಂಪತಿ ವ್ಯಾವಹಾರಿಕ ಸಂಬಂಧ ಹೊಂದಿರುವುದಕ್ಕೆ ಈ ಫೊಟೊಗಳು ಸಾಕ್ಷಿ ಎನ್ನಲಾಗಿದೆ.

ಅಮೆರಿಕ ವಾಸಿಯಾಗಿರುವ ಟೋನಿ ಆಶೈ ಜೊತೆಗೆ ಶಾರೂಕ್‌ ಖಾನ್‌ ವ್ಯವಹಾರ ಹೊಂದಿದ್ದಾರೆ. ಈ ಟೋನಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದ. ಆರ್ಕಿಟೆಕ್ಟ್‌ ಆಗಿರುವ ಟೋನಿ ಹುಟ್ಟಿದ್ದು ಕಾಶ್ಮೀರದಲ್ಲಿ. ಕಲ್ಲು ಮತ್ತು ಬಂದೂಕು ಎತ್ತಿಕೊಳ್ಳಿ ಎಂದು ಅವನು ಕಾಶ್ಮೀರದ ಯುವಕರನ್ನು ಕೆರಳಿಸುತ್ತಿದ್ದ.

ಹೂಸ್ಟನ್ ನಲ್ಲಿ ಸ್ವಂತ ರೇಡಿಯೊ ಚಾನೆಲ್‌ ಹೊಂದಿರುವ ಪಾಕಿಸ್ಥಾನ ಮೂಲದ ಸಿದ್ದಿಕಿ ತನ್ನ ಚಾನೆಲನ್ನು ಭಾರತ ವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ. ಈತ ಅಮೆರಿಕದಲ್ಲಿ 500ಕ್ಕೂ ಅಧಿಕ ಸಂಗೀತ ರಸಮಂಜರಿಗಳನ್ನು ಏರ್ಪಡಿಸಿದ್ದಾನೆ. ಇಂಥ ರಸಮಂಜರಿಗಳಲ್ಲಿ ಬಾಲಿವುಡ್‌ನ ಖ್ಯಾತನಾಮ ತಾರೆಯರು ಭಾಗವಹಿಸುತ್ತಿದ್ದರು.  ಪುಲ್ವಾಮ ದಾಳಿ ಹಾಗೂ ಬಾಲಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಸಂದರ್ಭದಲ್ಲಿ ಸಿದ್ದಿಕಿಯ ರೇಡಿಯೊ ಭಾರತದ ವಿರುದ್ಧ ನಂಜು ಕಾರುವ ಕಾರ್ಯಕ್ರಮಗಳನ್ನು ಪುಂಖಾನುಪುಂಖವಾಗಿ ಪ್ರಸಾರ ಮಾಡಿತ್ತು.error: Content is protected !!
Scroll to Top