ಮುಂಬಯಿ : ಕೊರೊನಾದಿಂದಾಗಿ ಈ ವರ್ಷ ಗಣೇಶೋತ್ಸವ ಜರಗುವುದು ಆನುಮಾನ.ಇದರಿಂದಾಗಿ ಮುಂಬಯಿಗರು ಭಾರೀ ಬೇಜಾರಿನಲ್ಲಿದ್ದಾರೆ. ಗಣೇಶೋತ್ಸವ ಮಹಾರಾಷ್ಟ್ರದಾದ್ಯಂತ 10 ದಿನ ಪರ್ಯಂತ ಭಾರೀ ಸಂಭ್ರಮದಿಂದ ಆಚರಿಸಲಾಗುವ ಹಬ್ಬ. ಊರಿನ ಗಲ್ಲಿಗಲ್ಲಿಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ. ಕೊರೊನಾದಿಂದಾಗಿ ಈ ವರ್ಷ ಇದು ಅಸಾಧ್ಯವಾಗಿರುವುದರಿಂದ ಬೃಹನ್ಮುಂಬಯಿ ಮಹಾನಗರಪಾಲಿಕೆ ವಾರ್ಡಿಗೊಂದು ಗಣಪನನ್ನು ಪ್ರತಿಷ್ಠಾಪಿಸಿ ಸರಳವಾಗಿ ಗಣೇಶೋತ್ಸವ ಆಚರಿಸುವ ಆಯ್ಕೆಯನ್ನು ಪರಿಗಣಿಸುವಂತೆ ಗಣೇಶ ಮಂಡಲಗಳನ್ನು ವಿನಂತಿಸಿದೆ.
ಮುಂಬಯಿಯ ಒಂದೊಂದು ವಾರ್ಡಿನಲ್ಲೂ 100 ರಿಂದ 150 ಗಣೇಶ ಮಂಡಲಗಳಿವೆ. ಪ್ರತಿವರ್ಷ ಈ ಗಣೇಶ ಮಂಡಲಗಳು ದೊಡ್ಡ ದೊಡ್ಡ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧಿಸುವುದು ವಾಡಿಕೆ.