ಕೊವ್ಯಾಕ್ಸಿನ್‌ ಲಸಿಕೆ ಮಾನವರ ಮೇಲೆ ಪ್ರಯೋಗ ಆರಂಭ

ಹೈದಾರಾಬಾದ್ಕೊರೊನಾ ರೋಗದಿಂದ ಮುಕ್ತಿ ನೀಡಬಹುದು ಎಂದು ಬಹು ನಿರೀಕ್ಷೆ ಇಟ್ಟಕೊಂಡಿರುವ ಕೋವ್ಯಾಕ್ಸಿನ್‌  ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸಿ ನೋಡುವ ಪ್ರಕ್ರಿಯೆ ಹೈದರಾಬಾದ್ ನಲ್ಲಿ ಶುರುವಾಗಿದೆ. ಹೈದಾರಾಬಾದ್ ನ ನಿಜಾಮ್ಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್‌ ಸಂಸ್ಥೆಯಲ್ಲಿ  ಇಬ್ಬರು ಪುರುಷ ಸ್ವಯಂ ಸೇವಕರಿಗೆ ಪರೀಕ್ಷಾರ್ಥವಾಗಿ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿದೆ.

ಕೋವ್ಯಾಕ್ಸಿನ್ ಪ್ರಯೋಗಕ್ಕೆ ಒಳಪಟ್ಟಿರುವ ಇಬ್ಬರೂ ವ್ಯಕ್ತಿಗಳನ ಮೇಲೆ ಸೂಕ್ಷ ನಿಗಾ ಇರಿಸಲಾಗಿದೆ.  ಇಬ್ಬರೂ ಆರೋಗ್ಯವಾಗಿದ್ದು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಎನ್ ಐಎಂಎಸ್ ನಲ್ಲಿ ಕ್ಲಿನಿಕಲ್ ಟ್ರಯಲ್ ನಲ್ಲಿ ತೊಡಗಿರುವ ವೈದ್ಯರು ತಿಳಿಸಿದ್ದಾರೆ.

375 ವ್ಯಕ್ತಿಗಳ ಮೇಲೆ ಈ ಔಷಧವನ್ನು ಪ್ರಯೋಗಿಸಲಾಗುತ್ತಿರುವ 12 ಸಂಸ್ಥೆಗಳಲ್ಲಿ ಈ ಆಸ್ಪತ್ರೆಯೂ ಒಂದಾಗಿದೆ. ಔಷಧ ಪ್ರಯೋಗಕ್ಕೆ ಒಳಪಡುವುದಕ್ಕೆ ಹಲವು ಮಂದಿ ಆಸಕ್ತಿ ತೋರಿದ್ದು, ಇ-ಮೇಲ್, ಕರೆಗಳ  ಮೂಲೆ ಪ್ರತಿಸ್ಪಂದಿಸುತ್ತಿದ್ದಾರೆ. ಆದರೆ ಫಿಟ್ನೆಸ್ ಹಾಗೂ ಕೋವಿಡ್-19 ಪ್ರತಿಕಾಯಗಳಿಗಾಗಿ ಕೇಂದ್ರ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗಳ ಫಲಿತಾಂಶದ ಬಳಿಕ ಲಸಿಕೆಯ ಪ್ರಯೋಗಕ್ಕೆ ಒಳಪಡುವ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ, ಎನ್ ಐಎಂಎಸ್ ನಲ್ಲಿ ಇಂತಹ 60 ವ್ಯಕ್ತಿಗಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗಿಸುವ ಉದ್ದೇಶ ಹೊಂದಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

error: Content is protected !!
Scroll to Top