ರೆಸಾರ್ಟ್‌ನಲ್ಲಿ ಬರ್ತ್‌ಡೇ ಪಾರ್ಟಿ ಮಾಡಿದ ವೈದ್ಯರು

ಪುಣೆ : ಕೊರೊನಾ ಹರಡುವುದನ್ನು ತಡೆಯುವ ಸಲುವಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸರಕಾರದಿಂದ ಹಿಡಿದು ಎಲ್ಲರೂ ಹೇಳುತ್ತಿದ್ದಾರೆ. ಅದರೆ ಕೆಲವೊಮ್ಮೆ ಹೀಗೆ ಬುದ್ಧಿ ಹೇಳುವವರಿಂದಲೇ ನಿಯಮ  ಉಲ್ಲಂಘನೆಯಾಗುತ್ತಿದೆ. ಪುಣೆಯಲ್ಲಿ ಇಂಥ ಒಂದು  ಘಟನೆ ಸಂಭವಿಸಿದೆ. ದುರಂತವೆಂದರೆ ಇಲ್ಲಿ ಜನರಿಗೆ ಅರಿವು ಮೂಡಿಸಬೇಕಾದ ವೈದ್ಯರಿಂದಲೇ ಲಾಕ್‌ ಡೌನ್‌ ನಿಯಮ ಉಲ್ಲಂಘನೆಯಾಗಿದೆ.

ಪುಣೆಯ ಹೊರಭಾಗವಾದ ಶಿರೂರ್‌ ನಲ್ಲಿರುವ ಒಂದು ರೆಸಾರ್ಟ್‌ ನಲ್ಲಿ ನಡೆಯುತ್ತಿದ್ದ ಭರ್ಜರಿ ಬರ್ತ್‌ ಡೇ ಪಾರ್ಟಿಯೊಂದಕ್ಕೆ ದಾಳಿ ಮಾಡಿರುವ ಪೊಲೀಸರು 11 ವೈದ್ಯರು ಹಾಗೂ ರೆಸಾರ್ಟ್‌ನ ಇಬ್ಬರು ಮೆನೇಜರ್ ಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ವೈದ್ಯರೆಲ್ಲ ಸೇರಿ ಓರ್ವ ವೈದ್ಯರ ಬರ್ತ್ ಡೇ ಪಾರ್ಟಿಯನ್ನು ರೆಸಾರ್ಟ್ ನಲ್ಲಿ  ಏರ್ಪಡಿಸಿದ್ದರು.

Latest Articles

error: Content is protected !!