ಕೊರೊನಾ ತಡೆಯಲು ಈ ಊರಿನ ಜನರು ಮಾಡಿದ್ದೇನು?

ಧಾರವಾಡ: ಕೊರೊನಾ ಕಾಟ ದಿನಕಳೆದಂತೆ ಹೆಚ್ಚಾಗುತ್ತಿದ್ದರೂ ಜನರಲ್ಲಿ ಇನ್ನೂ ಅರಿವು ಮೂಡಿಲ್ಲ ಈಗಲೂ ಜನರು ಬೇಜವಾಬ್ದಾರಿಯಿಂದ ಓಡಾಡುತ್ತಿರುವುದನ್ನು ಕಾಣಬಹುದು. ಆದರೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳದ ಜನರು ಮಾತ್ರ ಇದಕ್ಕೆ ಅಪವಾದ.ಇಲ್ಲಿನ ಜನರು ಕೊರೊನಾ ಪ್ರಸರಣವನ್ನು ತಡೆಯುವ ಸಲುವಾಗಿ ತಮ್ಮದೇ ಆದ ನಿಯಮಗಳನ್ನು ರಚಿಸಿಕೊಂಡಿದ್ದಾರೆಗ್ರಾಮದಲ್ಲಿ ನಡೆಯುವ ನಾಗದೇವರ ಜಾತ್ರೆಯನ್ನು ಈ ವರ್ಷ  ರದ್ದುಪಡಿಸಲಾಗಿದೆ. ಅಷ್ಟೇ ಅಲ್ಲ,ಕೊರೊನಾ ನಿಯಮಗಳನ್ನು ಉಲ್ಲಂಘಿಸಿದರೆ ದಂಡವನ್ನೂ ಹಾಕಲಾಗುವುದು.  

ಅಮರಗೋಳ ಗ್ರಾಮ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಊರು. ಅಲ್ಲಿಯೇ ಈಗ ವಿಶೇಷ ನಿರ್ಧಾರ ತೆಗೆದುಕೊಂಡಿದ್ದಾರೆ ಗ್ರಾಮಸ್ಥರು. ನಾಗ ಪಂಚಮಿಯ ದಿನದಂದು ನಡೆಯುವ ಜಾತ್ರೆಗೆ ಪರವೂರಿಂದ ಯಾರಾದರೂ ಬಂದರೆ ಅವರಿಗೆ 500 ರೂ.ದಂಡ ಹಾಕಲು ಹಾಗೂ ಯಾರಾದರೂ ಬಂಧುಗಳನ್ನು ಕರೆಸಿಕೊಂಡರೆ ಅವರಿಗೆ 1,000 ರೂ. ದಂಡ ಹಾಕಲು ತೀರ್ಮಾನ ಮಾಡಲಾಗಿದೆ.

ಈ ಸಂಬಂಧ ಗ್ರಾಮಸ್ಥರೇ ತೀರ್ಮಾನ ತೆಗೆದುಕೊಂಡು ಅಕ್ಕಪಕ್ಕದ ಊರಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಪ್ರಸಿದ್ಧ ಜಾತ್ರೆಯನ್ನ ರದ್ದು ಮಾಡುವುದಲ್ಲದೇ ಬಂದ ಬೀಗರಿಗೂ, ಕರೆಸಿಕೊಂಡವರಿಗೂ ದಂಡದ ಎಚ್ಚರಿಕೆ ನೀಡಿ ಕೊರೋನಾ ತಡೆಯಲು ತೆಗೆದುಕೊಂಡ ತೀರ್ಮಾನ ವಿಶೇಷವೆನಿಸಿದೆ.

ನಿಯಮ ತುಸು ಅತಿರೇಕದಂತೆ ಕಂಡರೂ ಕೊರೊನಾ ಸೋಂಕು ಪ್ರಸರಣವನ್ನು ತಡೆಯಲು ಊರಿನ ಜನರಿಗಿರುವ ಕಾಳಜಿ ಪ್ರಶಂಸೆಗೆ ಪಾತ್ರವಾಗಿದೆ.

Latest Articles

error: Content is protected !!