ರಾಜಸ್ಥಾನ ಬಿಕ್ಕಟ್ಟು : ಕುತೂಹಲ ಕೆರಳಿಸಿರುವ ವಸುಂಧರಾ ಮೌನ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿ ಐದು ದಿನಗಳಾಗಿದ್ದರೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಎಲ್ಲೂ ಕಾಣಿಸದಿರುವುದು ಕುತೂಹಲ ಹುಟ್ಟಿಸಿದೆ. ಅಶೋಕ್‌ ಗೆಹ್ಲೊಟ್‌ ಸರಕಾರದ ವಿರುದ್ಧ ಸಚಿನ್‌ ಪೈಲಟ್‌ ಬಂಡೆದ್ದ ಬಳಿಕ  ರಾಜಕೀಯ ದಿನಕ್ಕೊಂದು ತಿರುವು ಪತೆಯುತ್ತಿದೆ.ಆದರೆ ವಸುಂಧರಾ ರಾಜೆ ಇಷದಟರ ತನಕ ಈ ಕುರಿತು ಒಂದೇ ಒಂದು ಶಬ್ದ ಮಾತನಾತಿಲ್ಲ.

ರಾಜೆಯ ಈ ಮೌನಕ್ಕೂ ಸಾವಿರ ಅರ್ಥಗಳಿವೆ ಎಂಬ  ಗುಸುಗುಸು ರಾಜಸ್ಥಾನದ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಸಕ್ರಿಯರಾಗಿರುವ ರಾಜೆ ಸಾಮಾನ್ಯವಾಗಿ ಪ್ರತಿಯೊಂದು ವಿಚಾರಕ್ಕೂ ಪ್ರತಿಸ್ಪಂದಿಸುತ್ತಾರೆ. ಆದರೆ ಸದ್ಯದ ಬಿಕ್ಕಟ್ಟಿನ ಕುರಿತಂತೆ ಮೌನ ತಾಳಿದ್ದಾರೆ.

error: Content is protected !!
Scroll to Top