ದಿಲ್ಲಿ : ದೇಶದಲ್ಲಿ ಮತ್ತೊಮ್ಮೆ ಡೀಸಿಲ್ ಬೆಲೆ ಏರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಶುಕ್ರವಾರದಂದು ದೇಶದಾದ್ಯಂತ ಡೀಸೆಲ್ ಬೆಲೆ ಏರಿಕೆ ಮಾಡಿವೆ. ಆದರೆ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪೆಟ್ರೋಲ್ ದರ ಜೂನ್ 29ನೇ ತಾರೀಕಿನಿಂದಲೇ ಬದಲಾಗಿಲ್ಲ. ದೆಹಲಿಯಲ್ಲಿ ಮಾತ್ರ ಪೆಟ್ರೋಲ್ ಗಿಂತ ಡೀಸೆಲ್ ದರ ಹೆಚ್ಚಿದೆ. ದೇಶದ ಉಳಿದೆಡೆ ಪೆಟ್ರೋಲ್ ದರವೇ ಹೆಚ್ಚಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್- ಡೀಸೆಲ್ ದರ ಹೀಗಿದೆ: ದಿಲ್ಲಿ- ಪೆಟ್ರೋಲ್ 80.43, ಡೀಸೆಲ್ 81.35 ಕೋಲ್ಕತ್ತಾ -ಪೆಟ್ರೋಲ್ 82.10, ಡೀಸೆಲ್ 76.49 ಮುಂಬೈ – ಪೆಟ್ರೋಲ್ 87.19, ಡೀಸೆಲ್ 79.56 ಚೆನ್ನೈ – ಪೆಟ್ರೋಲ್ 83.63, ಡೀಸೆಲ್ 78.37 ಗುರುಗ್ರಾಮ ಪೆಟ್ರೋಲ್ 78.64, ಡೀಸೆಲ್ 73.28 ಬೆಂಗಳೂರು -ಪೆಟ್ರೋಲ್ 83.04, ಡೀಸೆಲ್ 77.31 ಹೈದರಾಬಾದ್-ಪೆಟ್ರೋಲ್ 83.49, ಡೀಸೆಲ್ 79.45.