ತಿರುಪತಿ : 15 ಅರ್ಚಕರಿಗೆ ಕೊರೋನಾ ಸೋಂಕು

ಹೈದರಾಬಾದ್: ತಿರುಪತಿಯ ಪ್ರಸಿದ್ಧ ತಿರುಮಲ ದೇವಾಲಯದ 15 ಮಂದಿ ಅರ್ಚಕರಿಗೆ  ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು 50 ಮಂದಿ ಅರ್ಚಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 15 ಮಂದಿ ಸೋಂಕಿತರಾಗಿದ್ದಾರೆ. ಇನ್ನೂ 25 ಮಂದಿ ಪರೀಕ್ಷೆಗೊಳಗಾಗಿದ್ದಾರೆ. ಇವರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಹೀಗಾಗಿ ತಿರುಪತಿ ದೇವಾಲಯದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇದೀಗ ದೇವಾಲಯದ ಎಲ್ಲಾ ಸಿಬ್ಬಂದಿಗಳಿಗೂ ಪರೀಕ್ಷೆ ನಡೆಸಲಾಗುತ್ತಿದ್ದು, ದೇವಾಲಯಕ್ಕೆ ಭೇಟಿ ನೀಡಿದ ಭಕ್ತಾದಿಗಳೂ ಕೊರೋನಾ ಪರೀಕ್ಷೆಗೊಳಗಾಗಲು ಟಿಡಿಪಿ ಮನವಿ ಮಾಡಿದೆ.error: Content is protected !!
Scroll to Top