ದೇಶದಲ್ಲಿ 10 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ದಿಲ್ಲಿ : ಯಾವುದು ಆಗಬಾರದು, ಆಗಲಾರದು ಎಂದು  ಭಾವಿಸಿದ್ದೆವೋ ಅದು ಆಗಿದೆ. ದೇಶದಲ್ಲಿ ಕೊರೊಜಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಲಾಕ್​ಡೌನ್​​ ನಿಯಮಗಳನ್ನು ಸಡಿಲಿಸಿದ್ದು, ಆರ್ಥಿಕತೆಯನ್ನು ರಕ್ಷಿಸುವ ಹೆಸರಿನಲ್ಲಿ  ಸಾಮಾಜಿಕ ನಿಯಮಗಳನ್ನು ಸಡಿಲಗೊಳಿಸಿದ್ದು ಇದಕ್ಕೆ ಕಾರಣ  ಎನ್ನಲಾಗುತ್ತಿದೆ. ಜೊತೆಗೆ ಜನರ ಬೇಜವಾಬ್ದಾರಿ ವರ್ತನೆಯೂ ಸೇರಿ ಈಗ ಸೋಂಕು ನಿಯಂತ್ರಣಕ್ಕೆ ಸಿಗದ ಸ್ಥಿತಿಗೆ ತಲುಪಿದ್ದೇವೆ.  ಪರಿಣಾಮವಾಗಿ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 10 ಲಕ್ಷದ  ಗಡಿ ದಾಟಿದೆ.
ಇದಲ್ಲದೆ ಗುರುವಾರ 687 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 25 ಸಾವಿರದ ಗಡಿ ದಾಟಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 6,35,756 ಜನ ಮಾತ್ರ. ದೇಶದಲ್ಲಿ ಇನ್ನೂ 3,42,473 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.







































error: Content is protected !!
Scroll to Top