ಟ್ವಿಟರ್‌ ಇತಿಹಾಸದಲ್ಲಿ ಅತಿ ದೊಡ್ಡ ಹ್ಯಾಕಿಂಗ್- ಹಲವು ಖ್ಯಾತನಾಮರ ಖಾತೆಗಳಿಗೆ ಕನ್ನ

ನ್ಯೂಯಾರ್ಕ್‌ : ಅತ್ಯಂತ ಜನಪ್ರಿಯವಾಗಿರುವ  ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಅತಿ ದೊಡ್‌ ಭದ್ರತಾ ಲೋಪ ಸಂಭವಿಸಿದೆ. ಪ್ರಸಿದ್ಧ ವ್ಯಕ್ತಿಗಳ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು,  ಈ ಬಗ್ಗೆ ಟ್ವಿಟ್ಟರ್ ಗೆ  ಅನೇಕ  ದೂರುಗಳು ಬಂದಿವೆ.  ಅಮರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಅಮೆಜಾನ್ ಸಿಇಓ ಜೆಫ್ ಬೆಜೋಸ್, ವಾರೆನ್ ಬಫೆಟ್, ಬಿಲ್ ಗೇಟ್ಸ್, ಎಲೋನ್ ಮಸ್ಕ್, ಜೋ ಬಿಡನ್ ಸೇರಿದಂತೆ ಹಲವರ ಟ್ವಿಟ್ಟರ್ ಖಾತೆಗಳನ್ನು ಹ್ಯಾಕರ್ ಗಳು ಬೇಟೆಯಾಡಿದ್ದಾರೆ. ಇದು ಟ್ವಿಟ್ಟರ್ ನ ಇತಿಹಾಸದಲ್ಲೇ ಅತಿ ದೊಡ್ಡ ಭದ್ರತಾ ಲೋಪ ಎನ್ನಲಾಗುತ್ತಿದೆ.
ಹ್ಯಾಕ್ ಗೆ ಒಳಗಾಗಿರುವ ಟ್ವಿಟರ್‌ ಖಾತೆಗಳಿಂದ ಬಿಟ್ ಕಾಯಿನ್ ಹೆಸರಿನಲ್ಲಿ ದಾನ ಕೇಳಲಾಗಿದೆ. ವಿಶ್ವದ ದಿಗ್ಗಜ ಕಂಪನಿ ಶಾಮೀಲಾಗಿರುವ ಉಬರ್ ಹಾಗೂ ಆಪಲ್ ಸಂಸ್ಥೆಗಳ ಟ್ವಿಟ್ಟರ್ ಖಾತೆಗಳನ್ನು ಕೂಡ ಹ್ಯಾಕ್ ಮಾಡಲಾಗಿದೆ. ಬಿಲ್ ಗೇಟ್ಸ್ ಅವರ ಹ್ಯಾಕ್ ಗೆ ಒಳಗಾದ  ಖಾತೆಯಿಂದ ಮಾಡಲಾಗಿರುವ ಒಂದು ಟ್ವೀಟ್ ಪ್ರಕಾರ, “ಪ್ರತಿಯೊಬ್ಬರೂ ನನಗೆ ಸಮಾಜಕ್ಕೆ ಹಿಂದಿರುಗಿಸಲು ಹೇಳುತ್ತಾರೆ. ಇದೀಗ ಆ ಸಮಯ ಬಂದಿದ್ದು, ನೀವು ನನಗೆ ಒಂದು ಸಾವಿರ ಡಾಲರ್ ನೀಡಿದರೆ ನಾನು ನಿಮಗೆ ಎರಡು ಸಾವಿರ ಡಾಲರ್ ಹಿಂದಿರುಗಿಸುವೆ” ಎಂದು ಬರೆಯಲಾಗಿದೆ. ಇನ್ನು ಹಲವು ಪ್ರಸಿದ್ಧ ವ್ಯಕ್ತಿಗಳ ಟ್ವಿಟರ್‌ ಖಾತೆಗಳನ್ನು ಇದೇ ರೀತಿ ಹ್ಯಾಕ್‌ ಮಾಡಿ ಮನವಿ ಮಾಡಲಾಗಿದೆ.

ಬಿಟ್ ಕಾಯಿನ್ ಸ್ಕೈಪ್ ಹ್ಯಾಕಿಂಗ್ ಘಟನೆಯ ಬಳಿಕ ಕೋಲಾಹಲ
ಬಿಟ್ ಕಾಯಿನ್ ಸ್ಕೈಪ್ ಹ್ಯಾಕಿಂಗ್ ಘಟನೆ ಬೆಳಕಿಗೆ ಬಂದ ಬಳಿಕ ಸಾವಿರಾರು ಜನರು ಹ್ಯಾಕರ್ ಗಳ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲ ಅವರು ಒಂದು ಲಕ್ಷಕ್ಕೂ ಅಧಿಕ ಡಾಲರ್ ಮೊತ್ತದ ಹಣವನ್ನು ಕಳುಹಿಸಿದ್ದಾರೆ. ಖ್ಯಾತನಾಮರ ಟ್ವಿಟ್ಟರ್ ಖಾತೆ ಹ್ಯಾಕ್ ಗೊಂಡ ದೂರುಗಳ ಬಳಿಕ ಕಂಪನಿ ಈ ಕುರಿತು ಸ್ಪಷ್ಟೀಕರಣ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಮಾಡಿರುವ ಟ್ವಿಟ್ಟರ್ ಈ ಘಟನೆಯ ಕುರಿತು ಈಗಾಗಲೇ ಮಾಹಿತಿ ಪಡೆಯಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದಿದೆ ಹಾಗೂ ತನಿಖೆಗೆ ಸಂಬಂಧಿಸಿದಂತೆ ಶೀಘ್ರವೇ ಹೇಳಿಕೆ ಬಿಡುಗಡೆ ಮಾಡಲಾಗುವದು ಎಂದಿದೆ. ಜೊತೆಗೆ ತನಿಖೆ ಪೂರ್ಣಗೊಳ್ಳುವವರೆಗೆ ಪಾಸ್ವರ್ಡ್ ರಿಸೆಟ್ ಅಥವಾ ಟ್ವೀಟ್ ಗಳನ್ನು ಕೂಡ ಮಾಡಲಾಗುವುದಿಲ್ಲ ಎಂದಿದೆ.

error: Content is protected !!
Scroll to Top