ದಿಲ್ಲಿ : ಕಳೆದ ಜೂ. 14ರಂದು ಮುಂಬಯಿಯಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಯುವನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತಾಗಿರುವ ನಿಗೂಢತೆ ಸದ್ಯಕ್ಕೆ ಮುಗಿಯುವ ಹಾಗೇ ಕಾಣಿಸುತ್ತಿಲ್ಲ.
ಇದೀಗ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. “ನಾನು ಸುಶಾಂತ್ ಸಿಂಗ್ ಗೆಳತಿ. ಸುಶಾಂತ್ ತೀರಿಕೊಂಡು ಒಂದು ತಿಂಗಳ ಮೇಲಾಯಿತು. ಸರ್ಕಾರದ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಆದರೆ ನ್ಯಾಯಕ್ಕೆ ಅಪಚಾರವಾಗಬಾರದು ಎಂಬ ಕಾರಣಕ್ಕೆ ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತೇನೆ” ಎಂಬುದಾಗಿ ಟ್ವೀಟ್ ಮಾಡಿದ್ದಾರೆ.ಸುಶಾಂತ್ ಸಾವಿನ ಹಿಂದೆ ಭೂಗತ ಜದತ್ತಿನ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬ<ದಿರುವ ಹಿನ್ನೆಯಲ್ಲಿ ರಿಯಾ ಬೇಡಿಕೆಗೆ ಮಹತ್ವವಿದೆ.