ಕೊರೊನಾ ಕಾಟ – ಸಂಭ್ರಮ ರಹಿತ ಸ್ವಾತಂತ್ರ್ಯ ದಿನಾಚರಣೆ

ದಿಲ್ಲಿ : ಕೊರೊನಾ ವೈರಸ್‌  ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೂ ತಣ್ಣೀರು ಎರಚಲಿದೆ. ಪ್ರಧಾನಿ ನರೇಂದ್ರ ಮೋದಿ ಸಂಪ್ರದಾಯದಂತೆ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡತ್ತಾರಾದರೂ ಅದನ್ನೂ ಕಣ್ತುಂಬಿಕೊಳ್ಳುವ ಜನರ ಸಂಖ್ಯೆಗೆ ಕಡಿವಾಣ ಬೀಳಲಿದೆ.

ಸಾಮಾನ್ಯವಾಗಿ ಪ್ರತಿ ವರ್ಷವೂ ಪ್ರಧಾನಿ ಭಾಷಣಕ್ಕೆ ಸುಮಾರು ಸಾವಿರ ಮಂದಿ ಗಣ್ಯರಿಗೆ ಪ್ರತ್ಯಕ್ಷ ಅವಕಾಶವಿರುತ್ತಿತ್ತು. ಆದರೆ ಈ ಬಾರಿ ಕೇವಲ ನೂರು ಮಂದಿಗಷ್ಟೇ ಪ್ರಧಾನಿ ಭಾಷಣ ವೀಕ್ಷಣೆಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಇನ್ನೂ ಒಂದು ತಿಂಗಳು ಇದ್ದು, ಈಗಾಗಲೇ ಕೈಗೊಳ್ಳಬೇಕಾದ ವ್ಯವಸ್ಥೆಗಳ ಪರಿಶೀಲನೆ ನಡೆದಿದೆ.ಕೆಂಪು ಕೋಟೆಯಲ್ಲಿನ ಕಾರ್ಯಕ್ರಮಗಳನ್ನು ಕಡಿತಗೊಳಿಸಿ ಹೆಚ್ಚಿನ ಜನ ಸಂದಣಿ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.

ಇದೇ ರೀತಿ ವಿವಿಧ ರಾಜ್ಯಗಳಲ್ಲಿ ಸಹ ಸ್ವಾತಂತ್ರ್ಯ ದಿನಾಚರಣೆಗಳ ಸಂಪ್ರದಾಯ ಇದ್ದರೂ ಅದರ ಸಂಭ್ರಮಕ್ಕೆ ಕೋವಿಡ್ ಕಂಟಕ ಒಡ್ಡಲಿರುವುದು ಖಚಿತ ಎನ್ನುವಂತಾಗಿದೆ.

ಸ್ಥಳೀಯವಾಗಿ ಕೂಡ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಎಂದಿನ ಸಂಭ್ರಮ ಇರುವುದಿಲ್ಲ.ಶಾಲೆಗಳು ಇನ್ನೂ ಪ್ರಾರಂಭವಾಗದಿರುವುದರಿಂದ ಮಕ್ಕಳು ಸ್ವಾತಂತ್ರ್ಯೋತ್ಸವದ ಸಂಭ್ರಮದಿಂದ ವಂಚಿತರಾಗಲಿದ್ದಾರೆ.













































error: Content is protected !!
Scroll to Top