ಬೆಂಗಳೂರು : ಕೊರೊನಾ ಸೋಂಕಿನಪ್ರಕರ‍್ಗಳು ಹೆಚ್ಚಾಗಿರುವ ಹಿನ್ನೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮರಳಿ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಒಂದೇ ವಾರಕ್ಕೆ ಮುಗಿಯುವ ಸಾಧ್ಯತೆಯಿಲ್ಲ. ಬಲ್ಲ ಮೂಲಗಳು ಹೇಳುವ ಪ್ರಕಾರ ಕೊರೊನಾ ಸೋಂಕಿನ ಪ್ರಸರಣ ಸಂಪೈರ್ಣವಾಗಿ ನಿಯಂತ್ರಣಕ್ಕೆ ಬರುವ ತನಕ ಲಾಕ್ ಡೌನ್ ಮುಂದುವರಿಯಲಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಒಂದು ವಾರದ ಲಾಕ್‍ಡೌನ್‍ನಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ಲಾಕ್‍ಡೌನ್ ಮುಂದುವರಿಕೆಗೆ ಸಕಲ ಸಿದ್ದತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ.
ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಲಾಕ್‍ಡೌನ್ ಮುಂದುವರಿಸಬೇಕಾದ ಅನಿವಾರ್ಯತೆ ಇದೆ ಎನ್ನುವುದು ಗೊತ್ತಾಗಿದೆ. ಹೀಗಾಗಿ ಸರ್ಕಾರದ ಮಟ್ಟದಲ್ಲೂ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.
ಲಾಕ್‍ಡೌನ್ ಅವಧಿಯಲ್ಲಿ ಸೋಂಕು ತಹಬದಿಗೆ ಬರದಿದ್ದರೆ ಲಾಕ್‍ಡೌನ್ ಮುಂದುವರಿಕೆ ಅನಿವಾರ್ಯತೆಗೆ ಸಿದ್ದರಿರುವಂತೆಯೂ ಅಧಿಕಾರಿಗಳಿಗೆ ಸೂಚನೆ ದೊರೆತಿದೆ ಎನ್ನಲಾಗಿದೆ.
7 ಸಾವಿರ ಕಂಟೈನ್‍ಮೆಂಟ್ ಜೋನ್: ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ 7 ಸಾವಿರಕ್ಕೂ ಹೆಚ್ಚು ಕಂಟೈನ್‍ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗಿದೆ.
ದಕ್ಷಿಣ ವಲಯದಲ್ಲಿ 2045, ಪೂರ್ವದಲ್ಲಿ 955, ಪಶ್ಚಿಮದಲ್ಲಿ 762, ಬೊಮ್ಮನಹಳ್ಳಿಯಲ್ಲಿ 698, ಆರ್.ಆರ್.ನಗರದಲ್ಲಿ413, ಮಹದೇವಪುರದಲ್ಲಿ 378, ಯಲಹಂಕದಲ್ಲಿ 245, ದಾಸರಹಳ್ಳಿಯಲ್ಲಿ 102 ಕಂಟೈನ್‍ಮೆಂಟ್ ಜೋನ್‍ಗಳನ್ನು ಸ್ಥಾಪಿಸಲಾಗಿದೆ.
ಮನೆ ಮನೆಯಲ್ಲಿ ಪರೀಕ್ಷೆ: ಕೇಂದ್ರ ಆರೋಗ್ಯ ಇಲಾಖೆ ಸೂಚನೆಯಂತೆ ಕಂಟೈನ್‍ಮೆಂಟ್ ಜೋನ್‍ಗಳ ಪ್ರತಿ ಮನೆ ಮನೆಯಲ್ಲೂ ಕೊರೊನಾ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ರ್ಯಾಪೀಡ್ ಆಂಟಿಜೇನ್ ಕಿಟ್‍ಗಳ ಮೂಲಕ ಪ್ರತಿಯೊಬ್ಬರ ಗಂಟಲು ದ್ರವ ಪರೀಕ್ಷೆ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತರು ಸೂಚನೆ ನೀಡಿದ್ದಾರೆ.
ಸೋಂಕು ಲಕ್ಷಣವಿಲ್ಲದವರ ಗಂಟಲು ದ್ರವ ಪರೀಕ್ಷೆಗೆ ಬ್ರೇಕ್: ಕೊರೊನಾ ಸೋಂಕು ಲಕ್ಷಣವಿಲ್ಲದವರ ಗಂಟಲು ದ್ರವ ಪರೀಕ್ಷೆಗೆ ಬಿಬಿಎಂಪಿ ಬ್ರೇಕ್ ಹಾಕಿದೆ.
ಮೂರು ದಿನಗಳ ಕಾಲ ಬಿಬಿಎಂಪಿಯ ಫೀವರ್ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕು ಲಕ್ಷಣ ಕಾಣಿಸಿಕೊಳ್ಳದವರಿಗೆ ಗಂಟಲು ದ್ರವ ಪರೀಕ್ಷೆ ನಡೆಸದಿರುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.