ಕೋವಿಕೋಟ್-‌ಇದು ಕೊರೊನಾ ವಿರುದ್ಧ ರಕ್ಷಾಕವಚ

0

ಕರೋನಾ ಸೋಂಕನ್ನು ತಡೆಗಟ್ಟಲು ಬಂದ ಹೊಸ ತಂತ್ರ

ದಿಲ್ಲಿ: ಮನುಕಿಲವನ್ನು ಮಹಾಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್‌  ಸೋಂಕನ್ನು ತಡೆಗಟ್ಟಲು ಈಗ ಹೊಸದೊಂದು ತಂತ್ರವನ್ನು  ಆವಿಷ್ಕರಿಸಲಾಗಿದೆ. ಇದನ್ನು ಕೋವಿಕೋಟ್ ಎಂದು ಕರೆಯಲಾಗುತ್ತದೆ. ಕೋವಿಕೋಟ್‌ ನ್ನು  ಯಾವುದೇ ಮೇಲ್ಮೈಗೆ  ಬಳಿದರೆ  ಆ ಸ್ಥಳದಲ್ಲಿ 100 ದಿನಗಳ ಕಾಲ ಕೊರೊನಾ ವೈರಸ್  ತಡೆಯಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ  ಪ್ರಯೋಗಾಲಯದ ಮಾನ್ಯತೆ ಸಿಕ್ಕಿದೆ ಮತ್ತು ಈ ನ್ಯಾನೊ ತಂತ್ರಜ್ಞಾನವನ್ನು ಈಗಾಗಲೇ ರಾಷ್ಟ್ರಪತಿ ಭವನದಲ್ಲಿ ಸಹ ಬಳಸಲಾಗಿದೆ.

ಎನ್ಎಬಿಎಲ್ ಸರ್ಟಿಫೈಡ್
 ಕಚೇರಿ, ಲಿಫ್ಟ್, ಕಾರು, ಲ್ಯಾಪ್‌ಟಾಪ್ ಅಥವಾ ಮೊಬೈಲ್ ಫೋನ್ ಹೀಗೆ ಯಾವುದೇ ಆಗಿರಲಿ  ಕೋವಿಕೋಟ್‌ನ ಒಂದು ಪದರವು ಅವುಗಳನ್ನು ಸುರಕ್ಷಿತವಾಗಿಸುತ್ತದೆ. ಇದನ್ನು ಮೊದಲು ಸಿಂಪಡಿಸಿ ನಂತರ 2 ನಿಮಿಷಗಳ ಕಾಲ ಬಿಟ್ಟ ನಂತರ ಬಟ್ಟೆಯಿಂದ ಒರೆಸಲಾಗುತ್ತದೆ. ಈ ಹಂತದಿಂದ ಒಂದು ಪದರವನ್ನು ತಯಾರಿಸಲಾಗುತ್ತದೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸುವ ಪದರವು 90 ದಿನಗಳವರೆಗೆ ಅದಕ್ಕೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಕೋವಿಕೋಟ್ ಅನ್ನು ತಯಾರಿಸುವ ಕಂಪನಿಯು ತಮ್ಮ ಉತ್ಪನ್ನವು ಯಾವುದೇ ಮೇಲ್ಮೈಗೆ  ಸಿಂಪಡಿಸುವ ಮೂಲಕ ಕೊರೊನಾ ವೈರಸ್‌ನಿಂದ ರಕ್ಷಿಸುತ್ತದೆ ಎಂದು ಹೇಳಿಕೊಂಡಿದೆ. ಅದೇ ಸಮಯದಲ್ಲಿ ಕಂಪನಿಯು ತನ್ನ ಹಕ್ಕನ್ನು ಎನ್ಎಬಿಎಲ್ ಪ್ರಮಾಣೀಕರಿಸಿದೆ ಎಂದು ಹೇಳಿಕೊಂಡಿದೆ.

ಮೇಲ್ಮೈಯಲ್ಲಿ ವೈರಸ್ ಮಟಾಷ್
ದಿಲ್ಲಿ ಮತ್ತು ತಮಿಳುನಾಡು ಪೊಲೀಸ್ ಪ್ರಧಾನ ಕಚೇರಿ, ಮಹಾರಾಷ್ಟ್ರ ಸಚಿವಾಲಯ, ವಿದೇಶಾಂಗ ಸಚಿವಾಲಯದ ಕಚೇರಿ ರಾಷ್ಟ್ರಪತಿ ಭವನ ಈ ಎಲ್ಲ ಸ್ಥಳಗಳಲ್ಲಿ ಕೋವಿಕೋಟ್ ತಂತ್ರವನ್ನು ಬಳಸಲಾಗಿದೆ. ಕೋವಿಕೋಟ್ ಅನ್ನು ಬಳಸಿದ ಸ್ಥಳಗಳಲ್ಲಿ ಕೊರೊನಾದಂತಹ ವೈರಸ್ ಸಹ ಮೇಲ್ಮೈಯಲ್ಲಿ 90 ದಿನಗಳವರೆಗೆ ಬದುಕಲು ಸಾಧ್ಯವಿಲ್ಲ ಎಂಬ ಖಾತರಿ ಪ್ರಮಾಣಪತ್ರವನ್ನು ಕಂಪನಿ ನೀಡುತ್ತದೆ.

ಧಾರ್ಮಿಕ ನಂಬಿಕೆಗಳಲ್ಲಿ ಮದ್ಯವನ್ನು ಅಶುದ್ಧವೆಂದು ಪರಿಗಣಿಸಲಾಗಿರುವುದರಿಂದ ದೆಹಲಿಯ ಪ್ರಸಿದ್ಧ ಮತ್ತು ಪ್ರಾಚೀನ ಹನುಮಾನ್ ದೇವಸ್ಥಾನದಲ್ಲಿ ಸ್ಯಾನಿಟೈಸೇಶನ್ ನಿಷೇಧಿಸಲಾಗಿದೆ, ಆದ್ದರಿಂದ ದೇವಾಲಯದೊಳಗಿನ ಕೊರೊನಾ ಸೋಂಕು ನಿವಾರಿಸಲು ಕೋವಿಕೋಟ್ ಅನ್ನು ಈಗ ಬಳಸಲಾಗುತ್ತಿದೆ, ಇದರಿಂದಾಗಿ ನೀವು ದೇವಾಲಯಗಳಿಗೆ ಭೇಟಿ ನೀಡಲು ಕರೋನಾ ಸೋಂಕಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಕಂಪನಿ ತಿಳಿಸಿದೆ.

ಕೋವಿಕೋಟ್ ತಂತ್ರಜ್ಞಾನವನ್ನು ಭಾರತ ಸರ್ಕಾರದ ಸಿಎಸ್ಐಆರ್ ಗುರುತಿಸಿದೆ. ಇದು ಆಲ್ಕೋಹಾಲ್ ಅನ್ನು ಬಳಸುವುದಿಲ್ಲ ಮತ್ತು ತ್ವಚೆಯ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ.

ಹೀಗಿದೆ ಕೋವಿಕೋಟ್‌ ತಂತ್ರಜ್ಞಾನ

-ಮೊದಲನೆಯದಾಗಿ ಕೋವಿಕೋಟ್‌ನ ಪದರ ವಿದ್ಯುಚ್ಛಕ್ತಿಯಿಂದ  ಧನಾತ್ಮಕವಾಗಿ ಚಾರ್ಜ್ ಆಗುತ್ತದೆ.

-ಪಾಸಿಟಿವ್ ಚಾರ್ಜ್ ಕಣಗಳು 360 ಡಿಗ್ರಿ ರಕ್ಷಣೆಯನ್ನು ನೀಡುತ್ತವೆ, ಮೇಲ್ಮೈಯಲ್ಲಿ ಸಮವಾಗಿ ಹರಡುತ್ತವೆ.

-ಪಾಸಿಟಿವ್ ಚಾರ್ಜ್ ಕಣಗಳು ನ್ಯಾನೊ ಸ್ಟ್ರೈಕ್‌ಗಳನ್ನು ಹೊಂದಿರುತ್ತವೆ, ಇದು ಕೊರೊನಾ ವೈರಸ್‌ನ ಪ್ರೊಟೀನ್‌ ಹೊರ ಪದರದಲ್ಲಿ ಸೂಜಿಯಂತೆ ಚುಚ್ಚುತ್ತದೆ ಮತ್ತು ಆರ್‌ಎನ್‌ಎ ವೈರಸ್ ಅನ್ನು ಮುರಿಯುತ್ತದೆ.

-ಒಂದು ಲೇಪನದ ನಂತರ ಪ್ರತಿ 15 ದಿನಗಳಿಗೊಮ್ಮೆ ಲೇಪನವನ್ನು ಮರುಪರಿಶೀಲಿಸಿದಾಗ ಅದರಲ್ಲಿ ಯಾವುದೇ ರೀತಿಯ ದೋಷ ಕಂಡು ಬಂದರೆ ಮತ್ತೆ ಲೇಪಿಸಲಾಗುತ್ತದೆ.

-ನಂತರ ಪರೀಕ್ಷೆಯನ್ನು ಮಾಡಲಾಗುತ್ತದೆ ಮತ್ತು ಯಾವುದೇ ಮೇಲ್ಮೈಯಲ್ಲಿ ಮೈಕ್ರೊಪಾರ್ಟಿಕಲ್ ಕಿಣ್ವದ ಮಟ್ಟವು 50 ಕ್ಕಿಂತ ಕಡಿಮೆಯಿದ್ದರೆ, ಆ ಮೇಲ್ಮೈಯನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

ಸಾಮಾನ್ಯ ಸೋಂಕುನಿವಾರಕಕ್ಕಿಂತ ಭಿನ್ನ
ತ್ರೀ ಆರ್ ಮ್ಯಾನೇಜ್‌ಮೆಂಟ್ ಕಂಪನಿಯ ನವೀನ ಮತ್ತು ಕೋವಿಕೋಟ್‌ನ ನಿರ್ದೇಶಕ ಮನೀಶ್ ಪಾಠಕ್ ಅವರ ಪ್ರಕಾರ ಕೊರೊನಾ ವೈರಸ್‌ ಬಂದಾಗಿನಿಂದ ಅನೇಕ ರೀತಿಯ ಸೋಂಕು ನಿವಾರಕಗಳು ಮತ್ತು ಸ್ಯಾನಿಟೈಸರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಕೋವಿಕೋಟ್‌  ಸಾಮಾನ್ಯ ಸೋಂಕುನಿವಾರಕವಲ್ಲ. ನಾವು ಬಳಸುವ ಸಾಮಾನ್ಯ ಸೋಂಕು ನಿವಾರಕಗಳು  ಮೇಲ್ಮೈಯನ್ನು ಮೇಲಿನಿಂದ ಮಾತ್ರ ಸ್ವಚ್ಛಗೊಳಿಸುತ್ತದೆ. ಆದರೆ ಅದರ ನಂತರ ಯಾವುದೇ ಸೋಂಕಿತ ವ್ಯಕ್ತಿ ಅಥವಾ ಯಾವುದೇ ಸಾಮಾನ್ಯ ವ್ಯಕ್ತಿ ತಿಳಿಯದೆ ಅದನ್ನು ಮುಟ್ಟಿದರೆ, ಆ ಮೇಲ್ಮೈಯಲ್ಲಿ ವೈರಸ್‌ ಅಂಟಿಕೊಳ್ಳುತ್ತದೆ.











---
Previous articleತಮಿಳು ನಟ ವಿಜಯ್‌ ಮನೆಗೆ ಹುಸಿ ಬಾಂಬ್ ಬೆದರಿಕೆ
Next articleದೇಶದ ಮೊದಲ ಸ್ವದೇಶಿ ಸೋಷಿಯಲ್‌ ಮೀಡಿಯಾ app Elyments- ಏನಿದರ ವೈಶಿಷ್ಟ್ಯ?

LEAVE A REPLY

Please enter your comment!
Please enter your name here