ವಿಶ್ವದ ಅತಿದೊಡ್ಡ ಕೊರೊನಾ ಆಸ್ಪತ್ರೆ ಲೋಕಾರ್ಪಣೆ

ದಿಲ್ಲಿ : ವಿಶ್ವದಲ್ಲೇ ಅತಿದೊಡ್ಡ ಕೊರೊನಾ ಆರೈಕೆ ಕೆಂದ್ರವೆಂದು ಹೆಸರಾದ 10,500 ಬೆಡ್ಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಭಾನುವಾರ ಇಲ್ಲಿನ ರಾಧಾ ಸೋಮಿ ಸತ್ಸಂಗ್ ಬಿಯಾಸ್‌ನಲ್ಲಿ ಉದ್ಘಾಟಿಸಿದರು.

ಸೌಮ್ಯ ಮತ್ತು ಲಕ್ಷಣರಹಿತ ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಛತ್ತಾಪುರದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರೋಗ ಲಕ್ಷಣವಿಲ್ಲದ, ಆದರೆ ಮನೆಯಲ್ಲಿ ಐಸೋಲೇಶನ್ ಸೌಲಭ್ಯ ಸಾಧ್ಯವಾಗದವರಿಗೆ ಇದು ಚಿಕಿತ್ಸಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.

ಈ ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ – ಅಂದಾಜು 20 ಫುಟ್ಬಾಲ್ ಮೈದಾನಗಳ ಗಾತ್ರ – ಮತ್ತು 200 ವಿಭಾಗಗಳನ್ನು  ಹೊಂದಿದ್ದು, ತಲಾ ಒಂದೊಂದು ವಿಭಾಗದಲ್ಲಿ 50 ಹಾಸಿಗೆಗಳ ಸೌಲಭ್ಯವಿದೆ.

Latest Articles

error: Content is protected !!