ಅವರು ಮುಂಬಯಿಯ ಡೋಂಗ್ರಿ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿದ್ದವರು. ಕಳೆದ ಮಾರ್ಚ ನಲ್ಲಷ್ಟೆ ನಿವೃತ್ತರಾಗಿದ್ದಾರೆ.ಕೆಲ ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ತಗಲಿತು.ಮುಂಬಯಿಯ ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿರುವ ಕಾರಣ ಮನೆಯವರು ನಿರ್ವಾಹವಿಲ್ಲದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು.ನಿವೃತ್ತರಾಗಿರುವ ಕಾರಣ ಸರಕಾರದ ಯಾವುದೇ ವೈದ್ಯಕೀಯ ಸೌಲಭ್ಯ ಅವರಿಗೆ ಸಿಗುವುದಿಲ್ಲ.
ಈ ಪೊಲೀಸದ ಅಧಿಕಾರಿಯ ದುರಂತ ಕತೆ ಸುರು ಆಗುವುದೇ ಇಲ್ಲಿಂದ.ಖಾಸಗಿ ಆಸ್ಪತ್ರೆಯಲ್ಲಿ ಈಗಾಗಲೇ 13.5 ಲ.ರೂ. ಬಿಲ್ ಆಗಿದೆ.ನಿವೃತ್ತಿ ಸಂದರ್ಭದಲ್ಲಿ ಸಿಕ್ಕಿದ ಹಣವೆಲ್ಲ ಆಸ್ಪತ್ರೆಗೆ ಸುರಿದಾಗಿದೆ.ಬಂಧುಗಳು, ಸ್ನೇಹಿತರು ಕೊರೊನಾ ಸಂಕಷ್ಟ ಕಾಲದಲ್ಲೂ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ ಆದರೂ ಹಣ ಸಾಕಾಗುತ್ತಿಲ್ಲ. ಕೊರೊನಾ ಒಂದೇ ಆಗಿದ್ದರೆ ಹೇಗಾದರೂ ಆಸ್ಪತ್ರೆಯಿಂದ ಹೊರಬರಬಹುದಿತ್ತು. ಈ ಅಧಿಕಾರಿಗೆ ಅದರ ಜೊತೆಗೆ ಇನ್ನೂ ಹಲವು ಸಮಸ್ಯೆಗಳಿವೆ.ಎಲ್ಲ ಸರಿಯಾಗಿ ಬಿಡುಗಡೆಯಾಗಬೇಕಾದರೆ ಕನಿಷ್ಠ 25 ಲ.ರೂ. ಹೊಂದಿಸಿ ಎಂದು ಆಸ್ಪತ್ರೆಯವರು ಹೇಳಿದ ಬಳಿಕ ಅಧಿಕಾರಿಯ ಕುಟುಂಬ ದಿಕ್ಕು ತೋಚದೆ ಕುಳಿತಿದೆ.
ಪತ್ನಿ ಮುಂಬಯಿ ಪೊಲೀಸ್ ವರಿಷ್ಠರಿಗೆ, ಗೃಹ ಇಲಾಖೆಗೆ ಪತ್ರ ಬರೆದು ನೆರವಿಗಾಗಿ ಅಂಗಲಾಚಿದ್ದಾರೆ. ಆದರೆ ಯಾರಿಂದಲೂ ಸಕರಾತ್ಮಕವಾದ ಭರವಸೆಗಳು ಸಿಕ್ಕಿಲ್ಲ.ಇರುವುದು ಪೊಲೀಸ್ ಕ್ವಾರ್ಟರ್ಸ್ ನಲ್ಲಿ.ಜೀವಮಾನದ ಗಳಿಕೆಯೆಲ್ಲ ಆಸ್ಪತ್ರೆ ಪಾಲಾಗಿದೆ.ಮುಂದೆ ಏನು ಎಂದು ದಿಕ್ಕುಗಾಣದೆ ಕುಳತಿದೆ ಈ ಕುಟುಂಬ.ಇದು ಈ ಪೊಲೀಸ್ ಅಧಿಕಾರಿಯ ಕತೆ ಮಾತ್ರವಲ್ಲ. ಎಲ್ಲ ಮಧ್ಯಮ ವರ್ಗದ ಕತೆಯೂ ಹೌದು. ಕೊರೊನಾ ಚಿಕಿತ್ಸೆಯ ಬಿಲ್ ಗೆ ಹೆದರಿಯೇ ಅನೇಕ ಮಂದಿ ಅರೆ ಜೀವವಾಗುತ್ತಿದ್ದಾರೆ.